ಸರ್ಕಾರ ಹಿಜಾಬ್ ತಂಟೆಗೆ ಬಂದರೆ ಸುಮ್ಮನೆ ಕೂರೊಲ್ಲ

0
2

ಶ್ರೀರಂಗಪಟ್ಟಣ: ಕಾಂಗ್ರೆಸ್ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸುವ ಕಾನೂನು ಜಾರಿಗೆ ತಂದಿದ್ದೇ ಆದಲ್ಲಿ ಹಿಂದುಗಳಾದ ನಾವು ಸುಮ್ಮನೆ ಕೂರುವುದಿಲ್ಲ. ನಮ್ಮ ಮಕ್ಕಳು ಸಹ ಕೇಸರಿ ಶಾಲು ಹಾಗೂ ಕೇಸರಿ ಪೇಟ ಧರಿಸಿ, ಶಾಲೆ, ಕಾಲೇಜುಗಳಲ್ಲಿ ರಾಮ ಜಪ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುತ್ವವಾದಿ ಕಲ್ಲಡ್ಕ ಪ್ರಭಾಕರ್ ಭಟ್ ಎಚ್ಚರಿಸಿದರು.
ಪಟ್ಟಣದಲ್ಲಿ ನಡೆದ ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆಗೂ ಮುನ್ನ ಗಂಜಾಂನ ನಿಮಿಷಾಂಭ ದೇವಾಲಯದ ಬಳಿಯ ಹನುಮ ದೇವಾಲಯದ ಬಳಿ ಹನುಮಾ ಮಾಲಾಧಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆದು ಪ್ರತ್ಯೇಕತೆ ಬೀಜ ಬಿತ್ತುತ್ತೀರಾ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ವಿದ್ಯಾರ್ಥಿಗಳಲ್ಲಿ ಭೇದ ಭಾವ ಬರಬಾರದೆಂಬ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದೀಗ ಮತ್ತೆ ಹಿಜಾಬ್ ಜಾರಿಗೆ ತರುತ್ತೇವೆ ಎಂಬ ಹೇಳಿಕೆ ನೀಡಿ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡಲು ಮುಂದಾಗುತ್ತಿದ್ದೀರಿ. ನಿಮಗೆ ಹಿಜಾಬ್ ಜಾರಿಗೆ ತರುವ ತಾಕತ್ ಇದೆಯಾ, ಹಿಜಾಬ್ ವಾಪಸ್ ತರುವ ಪ್ರಯತ್ನ ಮಾಡಿ ಎಂದು ಸವಾಲೆಸದರು.
ಈ ಹಿಂದೆ ಮಂಡ್ಯದಲ್ಲಿ ಕಾಲೇಜು ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಅಲ್ಲಾ ಹು ಅಕ್ಬರ್ ಘೋಷಣೆ ಹೇಳಿದ್ದಳು. ನೀನು ನಿನ್ನ ಮನೆ, ಮಸೀದಿಯಲ್ಲಿ ಈ ಘೋಷಣೆ ಕೂಗಿಕೋ. ಇದು ಹಿಂದುಗಳ ನಾಡು, ಈ ದೇಶದಲ್ಲಿ ರಾಮ್ ರಾಮ್ ಎಂದು ಹೇಳಬೇಕು. ಈ ದೇಶದಲ್ಲಿ ಇರಬೇಕಾದರೆ ಎಲ್ಲರಂತೆ ನೀನು ಸಹ ಇರಬೇಕು. ಮುಸ್ತಾನ್‌ಗೆ ಹಣ, ಶಹಬಾಶ್‌ ಗಿರಿ ಕೊಟ್ಟಿದ್ದು ಭಯೋತ್ಪಾದಕ ಸಂಘಟನೆ ಅಲ್‌ಖೈದಾ, ಆ ಸಂಘಟನೆ ಜೊತೆ ಸಂಪರ್ಕದಲ್ಲಿರುವ ಹೆಣ್ಣು ಮಗಳು ಮಂಡ್ಯದಲ್ಲಿದ್ದಾಳೆ. ಹಿಂದುಗಳು ಹುಷಾರಾಗಿರಬೇಕು. ನಾಳೆಯಿಂದ ಕಾಲೇಜಿಗೆ ಹೋಗುವುದಾಗಿ ಆಕೆ ಹೇಳಿದ್ದಾಳೆ, ತಾಕತ್ ಇದ್ದರೆ ಅವಳು ಕಾಲೇಜಿಗೆ ಹೋಗಲಿ ಎಂದು ಎಚ್ಚರಿಕೆ ನೀಡಿದರು.

Previous articleಸಿದ್ದರಾಮಯ್ಯನವರದ್ದು ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರ
Next articleಹಿಜಾಬ್ ವಿಚಾರದಲ್ಲಿ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ…