ಸರ್ಕಾರದ ವರ್ಗಾವಣೆ ದಂಧೆಯಿಂದ ನೌಕರರ ಕುಟುಂಬಕ್ಕೆ ದುರ್ಗತಿ

0
8

ಹುಬ್ಬಳ್ಳಿ: ವರ್ಗಾವಣೆಯನ್ನೇ ದಂಧೆಯನ್ನಾಗಿಸಿಕೊಂಡಿರುವ ಸಿದ್ದರಾಮಯ್ಯ ಸರ್ಕಾರದ ಧೋರಣೆಯಿಂದ ಸರ್ಕಾರಿ ನೌಕರರ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ೭೫ ವರ್ಷಗಳ ಇತಿಹಾಸದಲ್ಲೇ ಇಂತಹ ದರಿದ್ರ ಸರ್ಕಾರವನ್ನು ನೋಡಿಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜನಪರ ಆಡಳಿತ ನೀಡದೇ ಕೇವಲ ಭ್ರಷ್ಟಾಚಾರ ಮತ್ತು ಶೋಷಣೆಗಾಗಿಯೇ ಸರ್ಕಾರ ರಚನೆಯಾದಂತಾಗಿದೆ. ಸರ್ಕಾರಿ ಉದ್ಯೋಗಿಗಳ ವರ್ಗಾವಣೆಯೇ ಈ ಸರ್ಕಾರದ ಹಣದ ಮೂಲ ಎಂದು ಟೀಕಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ನೀಡಲಾಗಿದ್ದ ವಿವಿಧ ಕಾಮಗಾರಿಗಳನ್ನು ತಾಂತ್ರಿಕ ಕಾರಣ ನೀಡಿ ತಡೆ ಹಿಡಿಯಲಾಗಿದೆ. ಅವುಗಳಿಗೆ ಮರು ಚಾಲನೆ ನೀಡಲು ವಸೂಲಿ ದಂಧೆ ನಡೆದಿದೆ. ತಾಂತ್ರಿಕ ಕಾರಣ ಎಂಬುದು ನೆಪ ಅಷ್ಟೇ ಎಂದು ಆರೋಪಿಸಿ ಈಗಲೇ ಚುನಾವಣೆಗೆ ಹೋದರೆ ೧೦ ಸೀಟುಗಳನ್ನೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

Previous articleಅದು ಚೆಕ್ ಬೌನ್ಸ್ ಪ್ರಕರಣ ಅಲ್ಲ
Next articleಸ್ವರ್ಣವಲ್ಲೀ ಮಠದ ಉತ್ತರಾಧಿಕಾರಿ ನೇಮಕ