ಮಂಗಳೂರು: ಶಾಸಕರುಗಳಿಗೆ ಅನುದಾನ ನೀಡದೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿಲ್ಲ. ಕ್ಷೇತ್ರದ ಮತದಾರರಿಗೆ ಉತ್ತರ ಕೊಡಲಾಗುತ್ತಿಲ್ಲ ಎಂದು ಅನುದಾನ ನೀಡದ ವಿಚಾರದಲ್ಲಿ ಮಂಗಳೂರು ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕರು, ಉಸ್ತುವಾರಿ ಸಚಿವರ ನಡುವೆ ಮಾತಿನ ಸಮರ ಜೋರಾದ ಘಟನೆ ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ವಿರುದ್ಧ ಬಿಜೆಪಿ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರ ಜೊತೆಗೂಡಿ ದ.ಕ ಜಿಲ್ಲೆಯ ಬಿಜೆಪಿಯ ಎಲ್ಲಾ ಶಾಸಕರುಗಳು ಅನುದಾನ ನೀಡದಿರುವ ಬಗ್ಗೆ, ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಸಮರ ನಡೆದು ಶಾಸಕರುಗಳು ಸಭಾತ್ಯಾಗ ಮಾಡಿದರು. ದ.ಕ ಸಂಸದರಾದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನ್ಯಾಕ್, ಹರೀಶ್ ಪಪೂಂಜಾ, ಕಿಶೋರ್ ಕುಮಾರ್ ಅವರು ಸಭಾತ್ಯಾಗ ನಡೆಸಿದರು.