ಸರಕಾರಿ ನೌಕರರಂತೆ ಪರಿಗಣಿಸಲು ಪೌರಸೇವಾ ನೌಕರರ ಆಗ್ರಹ

0
37


ಇಳಕಲ್ : ರಾಜ್ಯದ ಎಲ್ಲಾ ಸರಕಾರಿ ನೌಕರರಂತೆ ನಮ್ಮನ್ನು ಪರಿಗಣಿಸಬೇಕು ಎಂದು ಪೌರಸೇವಾ ನೌಕರರು ಇಲ್ಲಿನ ನಗರಸಭೆಯ ಮುಂದೆ ಪ್ರತಿಭಟನೆ ಮಾಡಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಇದರ ಜೊತೆಗೆ ಚಿತ್ರದುರ್ಗ ರಾಜ್ಯ ಪೌರಸೇವಾ ನೌಕರರ ಸಮ್ಮೇಳನದಲ್ಲಿ ಮಂಡಿಸಿದ ೧೯ ಬೇಡಿಕೆಗಳನ್ನು ಸಹ ಈಡೇರಿಸಬೇಕು ಅಲ್ಲಿಯವರೆಗೆ ಎಲ್ಲಾ ಸಿಬ್ಭಂದಿಯವರು ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ಮಾಡುತ್ತೇವೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕೆಲಸ ಸ್ಥಗಿತ ಮುಷ್ಕರ ಮಾಡಬೇಕಾಗುವದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪೌರಸೇವಾ ನೌಕರರಾದ ಅಧ್ಯಕ್ಷೆ ಹುಲಿಗೆಮ್ಮ ಚಲವಾದಿ ಉಪಾಧ್ಯಕ್ಷ ಬಶೀರ ಕಮಾನಘರ ಕಾರ್ಯದರ್ಶಿ ಬಸವರಾಜ ಕಿರಗಿ ಮಂಜುನಾಥ ಮಾದರ ಭಾಗವಹಿಸಿದ್ದರು.

Previous articleಮನೆ ಬಾಗಿಲಿಗೆ ಬಂದ ಒಂಟಿ ಸಲಗ
Next articleಅಂತೂ ಅನುಮಾನ ನಿಜವಾಯಿತು! ಎಂದ ಕುಮಾರಸ್ವಾಮಿ