ಸಮುದ್ರದ ಅಲೆಗೆ ಕೊಚ್ಚಿ ಹೋದ ಸ್ಟಾರ್‌ ನಟಿ

0
8

ರಷ್ಯಾ ಮೂಲದ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ಸಮುದ್ರದ ದಡದ ಮೇಲಿನ ಬಂಡೆಗಳ ಮೇಲೆ ಕುಳಿತು, ಪ್ರಾಣಾಯಾಮ ಮಾಡುತ್ತಿದ್ದರು. ಇದೇ ವೇಲೆ ಜೋರಗಿ ಅಪ್ಪಳಿಸಿದ ಅಲೆಗಳು ನಟಿಯತ್ತ ಬಂದಿದ್ವು, ನೋಡ ನೋಡುತ್ತಿದ್ದಂತೆ ಅಲೆಗಳು ತೇಲಿ ಬಂದ ರಭಸಕ್ಕೆ ನಟಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ ಈ ಘಟನೆ ನಡೆದಿದ್ದು, ರಷ್ಯಾದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ (24) ದುರಂತವಾಗಿ ಸಾವನ್ನಪ್ಪಿದ್ದಾರೆ. ನಟಿ ಕ್ಯಾಮಿಲ್ಲಾ ಅವರಿಗೆ ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸವಿತ್ತು. ಸಮುದ್ರ ತೀರದ ಬಂಡೆಯ ಮೇಲೆ ಕೂತು ನಟಿ ಪ್ರಾಣಾಯಾಮ ಮಾಡುತ್ತಿದ್ದರು, ಇದೇ ವೇಳೆ ಅಲೆಯೊಂದು ಜೋರಾಗಿ ಅಪ್ಪಳಿಸಿದ್ದು, ನಟಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಪಕ್ಕದ ಬಂಡೆಯ ಮೇಲಿದ್ದವರು ನಟಿಯನ್ನು ರಕ್ಷಿಸುವ ಪ್ರಯತ್ನ ಮಡಿದರಾದರೂ, ನಟಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಟಿಗಾಗಿ ಪೋಲಿಸರು ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ಸಮುದ್ರ ಅಲೆಯಲ್ಲಿ ಕೊಚ್ಚಿ ಹೋದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Previous articleಮೈಸೂರು: ರಸ್ತೆಗೆ ಉರುಳಿದ ಬಂಡೆ – ತಪ್ಪಿದ ಅನಾಹುತ
Next articleಛತ್ರಪತಿ ಪಾತ್ರದಲ್ಲಿ ರಿಷಬ್: ಐತಿಹಾಸಿಕ ಚಿತ್ರದಲ್ಲಿ ಕಾಂತಾರ ಹೀರೋ