ಸಮಸ್ಯೆ ಮೆಟ್ಟಿನಿಂತರೆ ತೊಂದರೆ ಇಲ್ಲ: ಹಾರನಹಳ್ಳಿ

0
12

ಬೆಂಗಳೂರು: ಬ್ರಾಹ್ಮಣರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು ಅವುಗಳನ್ನು ತೊಡೆದು ಸಂಘಟನೆಗೆ ಮುಂದಾದರೆ ನಮ್ಮನ್ನು ಯಾವ ಶಕ್ತಿಯೂ ಏನು ಮಾಡಲು ಸಾಧ್ಯ ಇಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ಬ್ರಾಹ್ಮಣ ಮಹಾ ಸಮ್ಮೇಳನ ಹಾಗೂ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಒಳ ಪಂಗಡಗಳ ನಡುವೆ ಜಗಳ ಇದೆ. ಇದರ ಜತೆಗೆ ಸನಾತನ ಧರ್ಮ ಕೂಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಇವುಗಳನ್ನು ನಾವು ತೊಡೆದು ಹಾಕಬೇಕು. ಹೀಗಾದರೆ ನಮ್ಮನ್ನು ಯಾವ ಶಕ್ತಿಯೂ ಮೆಟ್ಟಿನಿಲ್ಲಲು ಸಾಧ್ಯವಿಲ್ಲ. ಗುರುಗಳ ಆಶೀರ್ವಾದ ವಿಪ್ರರ ಮೇಲೆ ಇದೆ. ಹೀಗಾಗಿ ನಮ್ಮ ಸಮಸ್ಯೆಗಳನ್ನು ಗುರುಗಳು ನಿವಾರಣೆ ಮಾಡುತ್ತಾರೆ. ಶ್ರೀಗಳು ನಮ್ಮ ನಡುವೆ ಇರುವ ಜಗಳವನ್ನು ನಿವಾರಿಸಿ ಶಕ್ತಿ ತುಂಬುತ್ತಾರೆ ಎಂದು ನಂಬಿದ್ದೇನೆ ಎಂದು ನುಡಿದರು.

ಗಣತಿಯಲ್ಲಿ ೧೪ ಲಕ್ಷ ಮಂದಿ ಬ್ರಾಹ್ಮಣರು
ರಾಜ್ಯದಲ್ಲಿ ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ಬ್ರಾಹ್ಮಣರು ೧೪ ಲಕ್ಷ ಮಂದಿ ಇದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ನಮ್ಮಲ್ಲಿ ಅನೇಕ ಒಳ ಪಂಗಡಗಳು ಇವೆ. ಒಳಪಂಗಡಗಳ ಆಧಾರದಲ್ಲಿ ಲೆಕ್ಕ ಹಾಕುತ್ತಾ ಹೋದರೆ ನಮ್ಮ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಎಲ್ಲ ಬ್ರಾಹ್ಮಣರು ಒಳಪಂಗಡ ಬಿಟ್ಟು ಬ್ರಾಹ್ಮಣರು ಎಂದು ಗುರುತಿಸಿಕೊಳ್ಳಬೇಕು. ನಾವು ಅನುಸರಿಸುತ್ತಾ ಬಂದಿರುವ ಸನಾತನ ಧರ್ಮವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು. ಬ್ರಾಹ್ಮಣ ತ್ರಿಮತಸ್ಥರಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ ಅವುಗಳನ್ನು ಹೋಗಲಾಡಿಸಬೇಕು. ಸಮ್ಮೇಳನದ ಮೂಲಕ ವಿವಿಧ ಒಳಪಂಗಡಗಳಲ್ಲಿ ಹರಿದು ಹಂಚಿ ಹೋಗಿರುವ ಎಲ್ಲ ವಿಪ್ರರು ಸಂಘಟನೆಗೊಳ್ಳಬೇಕು. ವಿದೇಶಗಳಲ್ಲೂ ಬ್ರಾಹ್ಮಣರು ಇದ್ದಾರೆ ಇವರನ್ನು ಕೂಡ ಸಂಘಟಿಸಬೇಕು. ಈ ನಿಟ್ಟಿನಲ್ಲಿ ಮಹಾಸಭಾ ಹೆಜ್ಜೆ ಇಡುತ್ತಿದೆ ಎಂದು ಅವರು ನುಡಿದರು.

ಹರಿದು ಬಂದ ಜನಸ್ತೋಮ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ೫೦ನೇ ವರ್ಷದ ಸಮ್ಮೇಳನಕ್ಕೆ ರಾಜ್ಯ ಸೇರಿದಂತೆ ನೆರೆಯ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ವಿಪ್ರ ಸಮಾಜದ ಬಂಧುಗಳು ಪಾಲ್ಗೊಂಡಿದ್ದರು. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆ ಜನೋಸ್ತಮ ಅದ್ಧೂರಿ ಸಮ್ಮೇಳನಕ್ಕೆ ತ್ರಿಪುರವಾಸಿನಿ ಸಭಾಂಗಣ ಶನಿವಾರ ಸಾಕ್ಷಿಯಾಯಿತು.

Previous articleಹಿಂದೂ ಧರ್ಮದಲ್ಲಿ ಐಕ್ಯಮತ ಅತ್ಯಗತ್ಯ
Next articleವಿವಿಧ ಪುಸ್ತಕ, ಲೋಕಾರ್ಪಣೆ