ಬಸವಕಲ್ಯಾಣ: ವಿದ್ಯುತ್ ತಗುಲಿ ಅಸ್ವಸ್ಥಗೊಂಡ ವ್ಯಕ್ತಿ ಮೃತಪಟ್ಟಿದ್ದಾನೆ ಅಂತ ವೈದ್ಯರು ಘೋಷಿಸಿದ ನಂತರವೂ ಆತ ಉಸಿರಾಡುತ್ತಿದ್ದ ಎನ್ನುವ ವಿಷಯ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗೋರ್ಟಾ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಮನೆಗೆ ನೀರುಣಿಸಲು ಹೋದ ವೇಳೆ ಆಕಸ್ಮಿಕವಾಗಿ ತಗುಲಿದ ವಿದ್ಯುತ್ ನಿಂದಾಗಿ ಗ್ರಾಮದ ಶಾಲಿವಾನ ಶಿಂಧೆ(೪೩) ಎನ್ನುವ ವ್ಯಕ್ತಿ ತೀವ್ರ ಅಸ್ವಸ್ಥನಾಗಿದ್ದಾನೆ. ತಕ್ಷಣ ಈತನಿಗೆ ಚಿಕಿತ್ಸೆಗೆಂದು ಬಸವಕಲ್ಯಾಣ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆತ ಈಗಾಗಲೇ ಮೃತಪಟ್ಟಿ ದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಹೀಗಾಗಿ ಮೃತ ವ್ಯಕ್ತಿ ಶವ ಗೋರ್ಟಾ ಗ್ರಾಮಕ್ಕೆ ರವಾನಿಸಲಾಗಿದೆ. ಗ್ರಾಮಕ್ಕೆ ಶವ ಸಾಗಿಸಿದ ನಂತರ ಮೃತ ವ್ಯಕ್ತಿ ಮತ್ತೆ ಉಸಿರಾಡುತ್ತಿದ್ದಾನೆ ಎಂದು ಕುಟುಂಬಸ್ಥರು ಚಿಕಿತ್ಸೆಗೆಂದು ಮತ್ತೆ ಬೀದರ್‌ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿಯೂ ಸಹ ಈತ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ಘೋಷಿಸಿದ ನಂತರ ಮೃತನ ಶವ ಪುನಃ ಗ್ರಾಮಕ್ಕೆ ತರಲಾಗಿದೆ.