ಸತ್ತ ವ್ಯಕ್ತಿ ಮತ್ತೆ ಉಸಿರಾಡಿದ?

0
29
ಸಾವು

ಬಸವಕಲ್ಯಾಣ( ಬೀದರ್ ಜಿಲ್ಲೆ) : ವಿದ್ಯುತ್ ತಗುಲಿ ಅಸ್ವಸ್ಥಗೊಂಡ ವ್ಯಕ್ತಿ ಮೃತಪಟ್ಟಿದ್ದಾನೆ ಅಂತ ವೈದ್ಯರು ಘೋಷಿಸಿದ ನಂತರವು ಆತ ಉಸಿರಾಡುತಿದ್ದ ಎನ್ನುವ ವಿಷಯ ತಾಲೂಕಿನ ಗೋರ್ಟಾ ಗ್ರಾಮದಿಂದ ಬೆಳಕಿಗೆ ಬಂದಿದೆ.
ಗೋರ್ಟಾ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಮನೆಗೆ ನೀರು ಉಣಿಸಲು ಹೋದ ವೇಳೆ ಆಕಸ್ಮಿಕವಾಗಿ ತಗುಲಿದ ವಿದ್ಯುತ್’ನಿಂದಾಗಿ ಗ್ರಾಮದ ಶಾಲಿವಾನ ಶಿಂಧೆ(43) ಎನ್ನುವ ವ್ಯಕ್ತಿ ತೀವ್ರ ಅಸ್ವಸ್ಥನಾಗಿದ್ದಾನೆ.
ತಕ್ಷಣ ಈತನಿಗೆ ಚಿಕಿತ್ಸೆಗೆಂದು ಬಸವಕಲ್ಯಾಣ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆತನ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಹೀಗಾಗಿ ಮೃತ ವ್ಯಕ್ತಿ ಶವ ಗೋರ್ಟಾ ಗ್ರಾಮಕ್ಕೆ ರವಾನಿಸಲಾಗಿದೆ.
ಗ್ರಾಮಕ್ಕೆ ಶವ ಸಾಗಿಸಿದ ನಂತರ ಮೃತ ವ್ಯಕ್ತಿ ಮತ್ತೆ ಉಸಿರಾಡುತಿದ್ದಾನೆ ಎಂದು ಕುಟುಂಬಸ್ಥರು ಚಿಕಿತ್ಸೆಗೆಂದು ಮತ್ತೆ ಬೀದರನ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿಯೂ ಸಹ ಈತ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ಘೋಷಿಸಿದ ನಂತರ ಮೃತನ ಶವ ಪುನಹ ಗೋರ್ಟಾ ಗ್ರಾಮಕ್ಕೆ ತರಲಾಗಿದೆ.
ಘಟನೆಯಲ್ಲಿ ವ್ಯಕ್ತಿ ಮೃತಪಟ್ಟ ಹಿನ್ನೆಲೆ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಕಂಡುಬರುತಿತ್ತು

Previous articleಕಾರಿನಲ್ಲಿ ಸಾಗಿಸುತ್ತಿದ್ದ ೧೮ ಚಿನ್ನದ ಉಂಗುರ ವಶ
Next articleಚಕ್ರವರ್ತಿ ಸೂಲಿಬೆಲೆ ವಾಹನ ತಪಾಸಣೆ