ಕಲಬುರಗಿ: ಬೀದರ ಜಿಲ್ಲೆಯ ಯುವ ಗುತ್ತಿಗೆದಾರ ಮೃತಪಟ್ಟ ಸಚಿನ್ ಪಾಂಚಾಳ ಅವರ ಬ್ಯಾಂಕ್ ಖಾತೆಗೆ ವಿವಿಧ ಬ್ಯಾಂಕ್‌ಗಳಿಂದ ಸುಮಾರು ೫೮.೭೭ ಲಕ್ಷ ರೂ. ಹಣ ವರ್ಗಾಯಿಸಲಾಗಿದೆ ಎಂದು ರಾಜು ಕಪನೂರ ಸಹೋದರ ಹಾಗೂ ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ ಕಪನೂರ ತಿಳಿಸಿದರು.
ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕರೆದ ಸುದ್ದಿಗೋಷ್ಠಿ ಮುನ್ನ ಮಾಧ್ಯಮಗಳಿಗೆ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಚಿನ ಪಾಂಚಾಳ್ ಡೆತ್‌ನೋಟ್‌ನಲ್ಲಿ ಎಲ್ಲಿಯೂ ನಾನು ಗುತ್ತಿಗೆದಾರ ಎಂದು ಹೇಳಿಲ್ಲ. ಬೇರೆಯವರ ಲೈಸನ್ಸ್‌ನಿಂದ ಟೆಂಡರ್ ಹಾಕುತ್ತೇನೆ ಎಂದು ಹೇಳಿ ಹಣ ಪಡೆದಿರುತ್ತಾನೆ. ಆರ್‌ಡಬ್ಲೂಎಸ್‌ಎಸ್‌ಡಿ, ಏರ್‌ಪೋರ್ಟ್, ಝೂ ಅಥಾರ್ಟಿ ಆಫ್ ಕರ್ನಾಟಕ ಕಲಬುರಗಿ, ಕೆಐಎಡಿಬಿ, ಕೆಆರ್‌ಐಡಿಎಲ್ ಟೆಂಡರ್‌ಗಳಿಗೆ ಹಣ ನೀಡಲಾಗಿತ್ತು. ಟೆಂಡರ್ ಫೇಕ್ ಇರುವುದರಿಂಂದ ನಾವು ನೀಡಿದ ಹಣವನ್ನು ಸಚಿನ್ ಮನೆಗೆ ಹೋಗಿ ವಾಪಸ್ ಕೊಡುವಂತೆ ಕೇಳಲಾಗಿದೆ ಎಂದರು.
ಸಚಿನ್ ಪಾಂಚಾಳ ಅವರ ಖಾತೆಗೆ ಪ್ರತಾಪ್ ಮಾರುತಿ ಧರೆ (ಪಪ್ಪು ಶೆಟ್) ಎಂಬುವವರು ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಿಂದ ೩೧-೦೧-೨೦೨೪ ರಂದು ೧೧.೨೫ ಲಕ್ಷ ರೂ. ಆರ್‌ಟಿಜಿಎಸ್ ಮಾಡಿದರೆ, ಮನೋಜ ಸೆಜೆವಾಲ್ ಅವರಿಂದ ಪಂಚಾಳ ಅವರ ಆಕ್ಸಿಸ್ ಬ್ಯಾಂಕ್‌ಗೆ ಎರಡು ಬಾರಿ ೧೧.೨೫ ಲಕ್ಷ ರೂ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸಲಾಗಿದೆ. ಸಿದ್ಧಾರ್ಥ ಪ್ರಹ್ಲಾದ್ ಎರಡು ಬಾರಿ ತಲಾ ೫ ಲಕ್ಷ ರೂ. ಹಣ ಹಾಗೂ ಕೆಎಸ್‌ಪಿ ಕನ್ಸಟ್ರಕ್ಷನ್‌ನಿಂದ ೧೫ ಲಕ್ಷ ರೂ. ಆಕ್ಸಿಸ್ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆ. ಒಟ್ಟಾರೆ ೫೮.೭೭ ಲಕ್ಷ ರೂ. ಸಚಿನ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು ಎಂದು ವಿವರಿಸಿದರು.