ಸಂಸದ ರಮೇಶ ಜಿಗಜಿಣಗಿ ಆಸ್ಪತ್ರೆಯಿಂದ ಬಿಡುಗಡೆ

0
13

ಬೆಳಗಾವಿ: ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಬುಧವಾರ ಬೆಳಗಾವಿಯ ಆಸ್ಪತ್ರೆಯಿಂದ ಬಿಡುಗಡೆಗೊಂಡು ವಿಜಯಪುರಕ್ಕೆ ತೆರಳಿದ್ದಾರೆ.
ವಿಪರೀತ ತಲೆ ನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು‌ ಕಳೆದ ವಾರ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಗುಣಮುಖರಾಗಿದ್ದ ಅವರನ್ನು‌ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಆಸ್ಪತ್ರೆಯಿಂದ ಊರಿಗೆ ತೆರಳುವ ಮುನ್ನ ಅವರು ಮನೆದೇವರು ಸವದತ್ತಿ ಯಲ್ಲಮ್ಮನ ದರ್ಶನ ಪಡೆದುಕೊಂಡರು.

Previous articleಗುಂಡಿಗೆ ಬಿದ್ದ ಕ್ಯಾಂಟರ್‌: ಮೂವರು ಯುವಕರ ಸಾವು
Next articleರಣ ಭೀಕರ ಬರ-ವ್ಯವಸ್ಥೆಗೆ ಬಡಿದ ಗರ