Home Advertisement
Home ತಾಜಾ ಸುದ್ದಿ ಸಂಸತ್ ಸಂಕೀರ್ಣದಲ್ಲಿ ವೀರ ವನಿತೆಗೆ ನಮನ

ಸಂಸತ್ ಸಂಕೀರ್ಣದಲ್ಲಿ ವೀರ ವನಿತೆಗೆ ನಮನ

0
108

ನವದೆಹಲಿ: ಭಾರತದ ಸಂಸತ್ ಸಂಕೀರ್ಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಸಿ ಅವರು ಹೆಮ್ಮೆಯ ವೀರ ವನಿತೆಗ ರಾಣಿ ಚೆನ್ನಮ್ಮನ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ರಕ್ಷಣೆಗಾಗಿ ಭಾರತೀಯರ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರನ್ನು ಸಂಗ್ರಾಮದಲ್ಲಿ ಮಣಿಸಿ ವಿಜಯದ ಕಹಳೆ ಮೊಳಗಿಸಿದ ಕರ್ನಾಟಕದ ಹೆಮ್ಮೆಯ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಕಿತ್ತೂರು ವಿಜಯೋತ್ಸವದ ಅಂಗವಾಗಿ ಇಂದು ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮಿಜೀಗಳು ಹಾಗೂ ಲೋಕ ಸಭೆಯ ಸಭಾಪತಿ ಓಂ ಬಿರ್ಲಾ, ಸಚಿವ ವಿ ಸೋಮಣ್ಣ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್‌ ಹಾಗೂ ದೆಹಲಿ ಕರ್ನಾಟಕ ಸಂಘದ ಪ್ರಮುಖರು ಹಾಗೂ ಅಭಿಮಾನಿ ಸಮೂಹ ಉಪಸ್ಥಿತರಿದ್ದರು.