ಸಂಬಳ ನೀಡದಿದ್ದಕ್ಕೆ ಬೇಸತ್ತು ಆಂಬ್ಯುಲೆನ್ಸ್ ಚಾಲಕ ಆತ್ಮಹತ್ಯೆ

0
37

ಬೆಳಗಾವಿ: ವೇತನ ನೀಡುವುದಕ್ಕೆ ವಿಳಂಬವಾದ ಕಾರಣಕ್ಕೆ ಮನನೊಂದು ಆಂಬ್ಯುಲೆನ್ಸ್ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನಾಗಿದ್ದ ಓಂಕಾರ ಪವಾರ(25) ಕಳೆದ 4 ತಿಂಗಳಿನಿಂದ ವೇತನವಿಲ್ಲದೆ ಸಾಕಷ್ಟು ತೊಂದರೆಗೊಳಗಾಗಿದ್ದ. ಶಹಾಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಈತ ಸಾಕಷ್ಟು ಬಾರಿ ವೇತನಕ್ಕಾಗಿ ತಾನು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಗೆ ಮನವಿ ಮಾಡಿದ್ದಾನೆ.
ಅದರೆ ಅವರು ಈತನ ಮನವಿ ಪರಿಗಣಿಸದೆ ಇದ್ದಾಗ ಆಸ್ಪತ್ರೆ ಮಂಡಳಿಯ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ಓಂಕಾರ್‌ಗೆ ಓರ್ವ ಮಗು ಇದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು.
ಆತ್ಮಹತ್ಯೆ ವಿಚಾರ ಗೊತ್ತಿದ್ದರೂ ಸ್ಥಳಕ್ಕೆ ಬಾರದೇ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕುಟುಂಬಸ್ಥರು ಮತ್ತು ಡ್ರೈವರ್ ಸಂಘಟನೆ ಮುಖಂಡರಿಂದ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಯವರೇ ಸಾವಿಗೆ ಕಾರಣ ಅಂತಾ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Previous articleಹೃದಯಾಘಾತದಿಂದ ಹೆಡ್‌ಕಾನ್ಸ್ಟೇಬಲ್ ಸಾವು
Next articleಪ್ರಚೋದನಕಾರಿ ಹೇಳಿಕೆ: ಪ್ರಮುಖ ಆರೋಪಿ ಕಬೀರ್ ಖಾನ್ ಅಜ್ಮೀರ್‌ದಲ್ಲಿ ಬಂಧನ