ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ 2024ರ ಸೆಪ್ಟೆಂಬರ್ 20 ರಿಂದ 22ರ ವರೆಗೆ ಶ್ರೀ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಹಿಂದೂಪರ ಭಾಷಣಕಾರ ರವರನ್ನು ಶಹಾಪೂರ ತಾಲ್ಲೂಕಿನಾದ್ಯಂತ ಪ್ರವೇಶ ಮಾಡದಂತೆ ನಿರ್ಬಂಧ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಹೊರಡಿಸಿದ್ದಾರೆ.
 2024ರ ಸೆಪ್ಟೆಂಬರ್ 20 ರಂದು ರಾತ್ರಿ 12 ಗಂಟೆಯಿAದ 2024ರ ಸೆಪ್ಟೆಂಬರ್ 22ರ ಮಧ್ಯಾಹ್ನ 2 ಗಂಟೆಯ ವರೆಗೆ ಶ್ರೀ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಇವರಿಗೆ ಶಹಾಪೂರ ತಾಲ್ಲೂಕು ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ ಸೆಕ್ಷನ್ 133, 143, 144ಎ ರನ್ವಯ ನಿರ್ಬಂಧ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
        
                























