ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವ: ಕರ್ಮವೀರ ವಿಶೇಷ ಸಂಚಿಕೆ ಬಿಡುಗಡೆ

0
10

ಹುಬ್ಬಳ್ಳಿ: ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ವೃಂದಾವನದಲ್ಲಿ ಸೋಮವಾರ ಸಂಯುಕ್ತ ಕರ್ನಾಟಕ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವದ ಅಂಗವಾಗಿ “ಪರಿಪಾಹಿ ಗುರುರಾಯರ ನಿರುಪಮ ಸುಂದರಕಾಯ”ಕರ್ಮವೀರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.


ಸಂಯುಕ್ತ ಕರ್ನಾಟಕ‌ ಸಿಇಓ ಮೋಹನ್ ಹೆಗಡೆ, ಲೆಕ್ಕಪತ್ರ ವಿಭಾಗದ ಅಶೋಕ ಶಾನಭಾಗ್, ಶ್ರೀಮಠದ ಗೌರವ ವಿಚಾರಣಕರ್ತರಾದ ಎ.ಸಿ. ಗೋಪಾಲ, ಜಾಹೀರಾತು ವಿಭಾಗ ವ್ಯವಸ್ಥಾಪಕರಾದ ವಿಜ್ಞೇಶ ಭಟ್, ಪ್ರಸಾರಂಗ ವಿಭಾಗದ ಕೆ.ಎನ್. ಶಾಂತಗಿರಿ, ಶಾಮರಾವ್ ಕುಲಕರ್ಣಿ, ಗುರುರಾಜ ಹಾವನೂರು, ಸುಧೀಂದ್ರ ಹುಲಗೂರು, ವ್ಯವಸ್ಥಾಪಕರು‌ ಜೆ. ವೇಣುಗೋಪಾಲ, ಕೆ.ರಘೋತ್ತಮ ರಾವ್, ಅರ್ಚಕರಾದ ಗುರುರಾಜ ಆಚಾರ್ಯ ಸಾಮಗ, ಬಿಂದು ಮಾಧವ್ ಪುರೋಹಿತ್, ಮನೋಹರ್ ಪರ್ವತಿ ಸೇರಿದಂತೆ ಇತರರು ಇದ್ದರು.
ಕರ್ಮವೀರ ಸಂಚಿಕೆಯನ್ನು ರಾಘವೇಂದ್ರಸ್ವಾಮಿಗಳ ಸನ್ನಿದಾನದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಪತ್ರಿಕೆಗೆ ಶುಭ ಹಾರೈಸಿ ನಂತರ ಮಂತ್ರಾಕ್ಷತೆ ನೀಡಿ ಎಲ್ಲರನ್ನು‌ ಸನ್ಮಾನಿಸಿದರು.

Previous articleಕನ್ನಡಿಗರಿಗಾಗಿ ಅವರೆತ್ತಿದ ಗಟ್ಟಿ ಧ್ವನಿ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ
Next articleಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ