ಶ್ರೀಶೈಲ ಸ್ಪರ್ಶಲಿಂಗ ದರ್ಶನ

0
31

ಬಾಗಲಕೋಟೆ: ಯುಗಾದಿ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವರ ಸ್ಪರ್ಶ ಲಿಂಗ ದರ್ಶನಕ್ಕೆ ಅವಕಾಶವಿಲ್ಲ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಮಾ. ೨೭ರಿಂದ ೩೦ರವರೆಗೆ ಸಂಪೂರ್ಣವಾಗಿ ನಿಷೇಧಿಸಿ, ಅಲಂಕಾರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀಶೈಲ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಶ್ರೀನಿವಾಸರಾವ್ ಮತ್ತು ಪ್ರಧಾನ ಅರ್ಚಕ ವೀರಯ್ಯಸ್ವಾಮಿ ತಿಳಿಸಿದ್ದಾರೆ. ಆದರೆ ಮಾ. ೧೭ರಿಂದ ೨೬ವರೆಗೆ ನಿರ್ದಿಷ್ಟ ಸಮಯದಲ್ಲಿ ಸ್ಪರ್ಶ ಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Previous articleವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ
Next articleಸ್ವಾಮೀಜಿಯಿಂದ ಬೈಗುಳದ ಜತೆಗೆ ಆಶೀರ್ವಾದ ರೂಪದಲ್ಲಿ ಹಣ ಪಡೆದ ಪೊಲೀಸರು