ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಕೋಟ್ಯಂತರ ಜನರ ಬಹುದಿನಗಳ ಕನಸು ಮತ್ತು ಹೋರಾಟ. ಅದಕ್ಕಾಗಿ ಅನೇಕರು ತಮ್ಮದೇ ಆದ ರೀತಿಯಲ್ಲಿ ಹರಕೆ ಕಟ್ಟಿದ್ದಾರೆ. ಇದರಲ್ಲಿ ಹುಬ್ಬಳ್ಳಿಯ ಹಿಂದೂ ಸಂಘನೆಯ ಮುಖಂಡ ಕೂಡ ಒಬ್ಬರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುವವರೆಗೂ ಮುಡಿ ತೆಗೆಯುವುದಿಲ್ಲ ಎಂದು ಶಪಥ ಮಾಡಿ ಹರಕೆ ಹೊತ್ತಿದ್ದು ತಮ್ಮ ೧೫ ವರ್ಷದ ಕನಸು ನನಸಾದ ಹಿನ್ನೆಲೆಯಲ್ಲಿ ಮುಡಿ ಸಮರ್ಪಣೆ ಮಾಡಿದ್ದಾರೆ.
ನಗರದ ಮಾಜಿ ಪಾಲಿಕೆ ಸದಸ್ಯ ನಾರಾಯಣ ಜರತಾರಘರ ಅವರ ಸಹೋದರ ಗಣು ಜರತಾರಘರ ಅವರು ಕಮರಿಪೇಟೆ ಶ್ರೀರಾಮ ಮಂದಿರದಲ್ಲಿ ಗುರುವಾರ ಮುಡಿ ಹರಕೆ ತೀರಿಸಿದರು. ಶಪಥ ಗೈದು 15 ವರ್ಷ 6 ತಿಂಗಳ ನಂತರ ಅಯೋಧ್ಯೆಯಲ್ಲಿ ರಾಮಲ್ಲಲ್ಲಾನ ಪ್ರಾಣ ಪ್ರತಿಷ್ಠಾನೆ ಆಗಿದೆ. ಪ್ರಾಣ ಪ್ರತಿಷ್ಠಾಪನೆಯಾಗಿ ಒಂದು ತಿಂಗಳ ಬಳಿಕ ಗಣೇಶ ಜರತಾರಘರ ಅವರು ಕೇಶ ಮುಂಡನೆ ಮಾಡಿಸಿಕೊಂಡಿದ್ದಾರೆ.