ಶ್ರೀರಂಗನಾಥನಿಗೆ ವೈಭವಯುತ ಬ್ರಹ್ಮ ರಥೋತ್ಸವ

0
15

ಶ್ರೀರಂಗಪಟ್ಟಣ: ಆದಿರಂಗ ಎಂದೇ ಖ್ಯಾತಿ ಹೊಂದಿರುವ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿಗೆ ಶುಕ್ರವಾರ ವೈಭಯುತ ಬ್ರಹ್ಮ ರಥೋತ್ಸವವು ಜರುಗಿತು.
ಮಧ್ಯಾಹ್ನ 3.10ಕ್ಕೆ ಸಲ್ಲುವ ಶುಭ ಮಹೂರ್ತದಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರೆ ಸೇರಿದಂತೆ ಮುಜರಾಯಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು‌ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀರಂಗನಾಥಸ್ವಾಮಿಗೆ ದೇಶದೆಲ್ಲೆಡೆ ಅಪಾರ ಪ್ರಮಾಣದಲ್ಲಿ ಭಕ್ತರಿದ್ದು, ರಥಸಪ್ತಮಿ ಅಂಗವಾಗಿ ಜರುಗಿದ ಬ್ರಹ್ಮ ರಥೋತ್ಸವವನ್ನು ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಕಣ್ತುಂಬಿಕೊಂಡು ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಪ್ರಧಾನ ಅರ್ಚಕ‌ ವಿಜಯ ಸಾರಥಿ ನೇತೃತ್ವದಲ್ಲಿ ಶ್ರೀರಂಗನಾಥ ಸ್ವಾಮಿಗೆ ವಿಶೇಷ ಪೂಜೆಗಳು ಜರುಗಿದವು.

Previous articleಪರಿಪೂರ್ಣ ದೃಷ್ಟಿಯ ಬಜೆಟ್
Next articleಮಂಗಳೂರು ರಥೋತ್ಸವ