ಶೆಡ್ಡಿಗೆ ಬೆಂಕಿ: ತಾಯಿ-ಮಗಳು ಸಜೀವ ದಹನ

0
19

ಬಾಗಲಕೋಟೆ: ಶೆಡವೊಂದರಲ್ಲಿ ಮೋಟಾರ್ ಮೂಲಕ ಪೆಟ್ರೋಲ್ ಸಿಂಪಡಿಸಿ ಬೆಂಕಿ ಹಚ್ಚಿರುವ ಘಟನೆ ಮುಧೋಳ ತಾಲೂಕಿನ ಅಕ್ಕಿಮರಡಿಯಲ್ಲಿ ಜರುಗಿದೆ. ಘಟ‌ನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ತಾಯಿ-ಮಗಳು ಸಜೀವ ದಹನವಾಗಿದ್ದಾರೆ.

ಜೈಬಾನ್(೫೫) ಶಬಾನ್ (೨೫) ಮೃತ ದುರ್ದೈವಿಗಳು. ದಸ್ತಗೀರಸಾಬ್, ಸುಬಾನ್ ಹಾಗೂ ಸಿದ್ಧಿಕಿ ಎಂಬುವವರಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ಪಿ ವೈ.ಅಮರನಾಥ ರೆಡ್ಡಿ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಘಟನೆ ಜರುಗಿದೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Previous articleಮಂಗಳವಾರ ಶಾಲೆ, ಕಾಲೇಜುಗಳಿಗೆ ರಜೆ
Next articleಕುಮ್ಕಿ ಭೂಮಿಗೆ ಕೈ ಹಾಕಿದರೆ…. ದಿಟ್ಟ ಉತ್ತರ ನೀಡಲು ಬದ್ಧ