ಶೆಟ್ಟರ್ ಬಿಟ್ಟಿದ್ದರಿಂದ ಕಾಂಗ್ರೆಸ್ ಶುದ್ಧವಾಯಿತು

0
11

ವಿಜಯಪುರ: ಪಕ್ಷ ಬಿಟ್ಟು ಹೋಗುವವರನ್ನು ಕಾಲಕಾಲಕ್ಕೂ ನೋಡಿಕೊಂಡು ಬಂದಿದ್ದೇವೆ. ಅವಕಾಶವಾದಿಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್ ಶುದ್ಧವಾಯಿತು. ಹೋಗುವವರು ಹೋಗುತ್ತಾರೆ, ಬರುವವರು ಬರುತ್ತಾರೆ. ನಮ್ಮ ಸಿದ್ಧಾಂತವನ್ನು ಇಟ್ಟುಕೊಂಡು ಮುಂದುವರೆಯುತ್ತೇವೆ. ಇನ್ನಷ್ಟು ಬದ್ಧತೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಯತ್ನಾಳ್ ಕಾರ್ಖಾನೆ ಬಂದ್‌ಗೆ ಪ್ರತಿಕ್ರಿಯೆ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ನಮ್ಮವರಲ್ಲ. ಅವರನ್ನು ಬಿಜೆಪಿ ಅಧಿಕಾರ ಅವಧಿಯಲ್ಲಿಯೇ ನೇಮಕ ಮಾಡಲಾಗಿದೆ. ಹಾಗಾಗಿ ಯತ್ನಾಳ ಕಾರ್ಖಾನೆಗೆ ನೋಟಿಸ್ ನೀಡುವಲ್ಲಿ ಬಿಜೆಪಿಯದ್ದೇ ಕೈವಾಡವಿದೆ. ಕಾನೂನು ಪ್ರಕಾರವೇ ಎಲ್ಲ ಸರ್ಕಾರಗಳು ಕ್ರಮ ತೆಗೆದುಕೊಳ್ಳುತ್ತವೆ. ಅದು ಯತ್ನಾಳ ಕಾರ್ಖಾನೆಯಾಗಿರಲಿ, ಎಂ.ಬಿ. ಪಾಟೀಲರದ್ದಾಗಿರಲಿ, ಇನ್ಯಾರದ್ದೋ ಆಗಿರಲಿ ಯಾವುದೇ ಸರಕಾರವಿದ್ದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

Previous articleಮದುವೆ ಆಮಂತ್ರಣದಲ್ಲಿ ಮೋದಿ ಪರ ಪ್ರಚಾರ
Next articleದೇವರಿಗೆ ಬಿಟ್ಟ ಕೋಣ ಅಪಘಾತದಲ್ಲಿ ಸಾವು