ಚಿಕ್ಕಮಗಳೂರು: ಶೃಂಗೇರಿ ಶಾರದಾಂಭೆ ಹಾಗೂ ಗುರುಗಳ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ವಸ್ತ್ರಸಂಹಿತೆ ವಿಧಿಸಿರುವುದನ್ನು ಸ್ವಾಗತಿಸಿ ಪುರೋಹಿತ ವರ್ಗ ಮಠದ ಆಡಳಿತ ಮಂಡಳಿ ಆಡಳಿತಾಧಿಕಾರಿ ಮುರಳಿ ಅವರನ್ನು ಅಭಿನಂದಿಸಿದ್ದಾರೆ.
ಆಡಳಿತಾಧಿಕಾರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದ ಪುರೋಹಿತ ವರ್ಗದವರು, ಶೃಂಗೇರಿ ಹಿಂದೂಗಳ ಪಾಲಿನ ಪರಮ ಪವಿತ್ರ ಭೂಮಿ. ಗುರು ಪರಂಪರೆಯಲ್ಲಿ ತನ್ನದೆಯಾದ ವೈಶಿಷ್ಟ್ಯತೆಯಿಂದ ಕೂಡಿರೋ ಹಿಂದೂಗಳ ಧಾರ್ಮಿಕ ಶ್ರದ್ಧ ಕೇಂದ್ರ ದೇವಾಲಯದಲ್ಲಿ ಧಾರ್ಮಿಕ ವಾತಾವರಣ ಕಾಯುವ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಶೃಂಗೇರಿ, ಕೊಪ್ಪ, ನರಸಿಂಹ ರಾಜಪುರ ಪುರೋಹಿತ ವರ್ಗದವರು ತಿಳಿಸಿದರು.