ಶೀಲ ಶಂಕಿಸಿ ಪತ್ನಿಯ ಕೊಲೆ

0
16
Murder

ಹೂವಿನಹಡಗಲಿ: ಪತ್ನಿಯ ಶೀಲ ಶಂಕಿಸಿ ಪತಿ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಕೆ.ಅಯ್ಯನಹಳ್ಳಿಯಲ್ಲಿ ಜರುಗಿದೆ.
ಅರುಣಾ(೨೮) ಕೊಲೆಯಾದ ಮಹಿಳೆ. ಪ್ರದೀಪ ಅಲಗೂರ(೩೦) ಕೊಲೆಗೈದ ಆರೋಪಿ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಮೈಗೂರು ಗ್ರಾಮದ ಪ್ರದೀಪ ಮತ್ತು ಕೆ.ಅಯ್ಯನಹಳ್ಳಿ ಗ್ರಾಮದ ಅರುಣಾ ಎಂಟು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದರು. ನಂತರ ಗಂಡನ ಮನೆಯಲ್ಲಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದ ದಂಪತಿ ನಾಲ್ಕು ವರ್ಷಗಳ ಹಿಂದೆ ಇಬ್ಬರು ಮಕ್ಕಳು ಸಮೇತ ತಾಲೂಕಿನ ಅಯ್ಯನಹಳ್ಳಿಗೆ ಬಂದು ನೆಲೆಸಿದ್ದರು. ಇಬ್ಬರು ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿದ್ದರು. ಹೆಂಡತಿಯ ಶೀಲ ಶಂಕಿಸಿ ಪದೇ ಪದೇ ಜಗಳವಾಡುತ್ತಿದ್ದ ಪ್ರದೀಪ ಶುಕ್ರವಾರ ಬೆಳಗ್ಗೆ ಜಗಳ ವಿಕೋಪಕ್ಕೆ ತಿರುಗಿ ಕೊಡಲಿಯಿಂದ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಆಸ್ತಿಗಾಗಿ ಕೊಲೆ: ಆರೋಪಿ ಬಂಧನ
Next articleಕಾಂಗ್ರೆಸ್ ಶಾಸಕರ ಅನರ್ಹತೆ ಪ್ರಸ್ತಾವನೆ ತಿರಸ್ಕಾರ