ಶೀಘ್ರದಲ್ಲಿ 5 ಸಾವಿರ ಶಿಕ್ಷಕರ ನೇಮಕ

0
118

ಕಲಬುರಗಿ: ರಾಜ್ಯದಲ್ಲಿ‌ ಖಾಲಿ‌ ಇರುವ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಶಿಕ್ಷಕರ ಹುದ್ದೆ ಭರ್ತಿಗೆ ಬಹಳ ಫಾಸ್ಟ್ ಆಗಿ ಪ್ರಕ್ರಿಯೆ ನಡೆದಿದೆ. ಹೈ .ಕ. ಭಾಗದಲ್ಲಿ ಈ ತಿಂಗಳು ಅಥವಾ ಮುಂದಿನ ತಿಂಗಳೊಳಗೆ ಪ್ರಕ್ರಿಯೆ ಆರಂಭವಾಗಲಿದೆ. ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಅನುದಾನಿತ ಶಾಲೆಯಲ್ಲಿ ಶಿಕ್ಷರ ನೇಮಕಾತಿ ಶೀಘ್ರವಾಗಲಿದೆ. ಯಾವುದೇ ಅಕ್ರಮ ನಡೆಯಬಾರದು ಎಂದು‌ ಸ್ವಲ್ಪ ತಡವಾಗಿ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

Previous articleಬಿಜೆಪಿಯವರು ಇನ್ನೂ ನಾಲ್ಕು ವರ್ಷ ಪ್ರತಿಭಟನೆ ಮಾಡ್ತಾನೆ ಇರಲಿ
Next articleಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಣೆ