ಶಿರೂರು ಭೂ ಕುಸಿತ ದುರಂತ: ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

0
16

ಹದಿನೈದು ದಿನಗಳ ನಂತರ ನದಿಯ ಮಣ್ಣು ದಿಬ್ಬ ತೆರವಿನ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು, ಎರಡು ದಿನದ ಹಿಂದೆ ನದಿಯ ಆಳದಲ್ಲಿ ಸಿಕ್ಕ ಮನುಷ್ಯರ ಮೂಳೆಗಳ ಡಿನ್‌ಎ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ತಿರ್ಮಾಮಿಸಲಾಗಿದೆ.

ಕಾರವಾರ: ಶಿರೂರು ಭೂ ಕುಸಿತ ದುರಂತ ಹಿನ್ನಲೆಯಲ್ಲಿ ಗಂಗಾವಳಿ ನದಿಯಲ್ಲಿ ನಡೆದ ಮೂರನೇ ಹಂತದ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು ಸ್ಥಗಿತಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಭೂ ಕುಸಿತದ ಹಿನ್ನೆಲೆ ಮೂರನೇ ಹಂತದ ಕಾರ್ಯಾಚರಣೆಯು ನಡೆಯುತ್ತಿತ್ತು. ಈ ಕಾರ್ಯಾಚರಣೆ 13 ದಿನ ಪೂರೈಸಿದ್ದು ಕಾರ್ಯಾಚರಣೆಯನ್ನು ಇಂದು ಸ್ಥಗಿತಮಾಡಲಾಗಿದೆ. ಕಳೆದ 13 ದಿನದಿಂದ ಡ್ರಜ್ಜಿಂಗ್ ಬೋಟ್ ಮೂಲಕ ನಡೆಯುತ್ತಿದ್ದ ಅಂಕೋಲದ ಗಂಗಾವಳಿ ನದಿಯಲ್ಲಿ ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. 90 ಲಕ್ಷದ ಮೊತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣಗೊಂಡಿದೆ. 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಹಾಗೂ ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿದೆ.

ಹದಿನೈದು ದಿನ ಬಳಿಕ ತೆರವಿನ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು : ಗಂಗಾವಳಿ ನದಿ ನೀರು (ಲೋಟೈಡದ ) ಇಳಿಕೆಯಾಗಿದೆ. ಹಾಗಾಗಿ ಮಣ್ಣು ದಿಬ್ಬ ಇರುವ ಕಡೆ ಡರ್ ಯಂತ್ರ ಹೂಳಿಗೆ ಸಿಲುಕುವ ಸಾಧ್ಯತೆ ಇದೆ. ನದಿಯಲ್ಲಿ ಹೆಚ್ಚು ಆಳ ಇರುವ ಕಡೆ ಡಜ್ಯರ್ ಯಂತ್ರ ಚಲಿಸಿದೆ. ಹದಿನೈದು ದಿನಗಳ ನಂತರ ನದಿಯ ಮಣ್ಣು ದಿಬ್ಬ ತೆರವಿನ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು, ಎರಡು ದಿನದ ಹಿಂದೆ ನದಿಯ ಆಳದಲ್ಲಿ ಸಿಕ್ಕ ಮನುಷ್ಯರ ಮೂಳೆಗಳ ಡಿನ್‌ಎ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ತಿರ್ಮಾಮಿಸಲಾಗಿದೆ. ಗುರುವಾರ ರಾತ್ರಿ ಅಥವಾ ಶುಕ್ರವಾರ ಡಿಎನ್‌ಎ ಫಲಿತಾಂಶ ನಮ್ಮಕೈ ಸೇರಲಿದೆ. ಗಂಗಾವಳಿ ನದಿ ದಂಡೆಯಲ್ಲಿ ಲಕ್ಷ್ಮಣ ನಾಯ್ಕ ಹೋಟೆಲ್ ಹಾಗೂ ಮನೆ ಇದ್ದ ಜಾಗದಲ್ಲಿ ಗುರುವಾರ ಹುಡುಕಾಟ ನಡೆದಿದೆ.ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಜೆಸಿಬಿ ಯಂತ್ರಗಳು ಶಿರೂರು ಜಗನ್ನಾಥ ಹೊಟೆಲ್ ಇದ್ದ ಪಕ್ಕದ ಸ್ಥಳದಲ್ಲಿ ಶೋಧ ನಡೆಸಿವೆ. ಮನೆಯ ಟೈಲ್ಲ ಹಾಗೂ ಕೆಲ ಪಾತ್ರಗಳು ದೊರೆತಿವೆ, ಶಿರೂರಿನ ಜಗನ್ನಾಥ್ ನಾಯ್ಕ, ಗಂಗೇಕೊಳ್ಳದ ಲೋಕೇಶ್ ನಾಯ್ಕ ದೇಹ ಸಿಗಬೇಕಿದೆ. ಡಿಎನ್‌ಎ ವರದಿಯು ಕೆಲ ಪಾಜಿಟಿವ್‌ ಫಲಿತಾಂಶ ತರಬಹುದು ಎಂಬ ನೀರೀಕ್ಷೆಯಿದೆ ಎಂದರು.

Previous articleಬಿಜೆಪಿಗೆ ಬಿಗ್‌ ಶಾಕ್: ಕಾಂಗ್ರೆಸ್‌ಗೆ ಮರು ಸೇರ್ಪಡೆಯಾದ ಅಶೋಕ್ ತನ್ವಾರ್
Next articleಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ