ಉತ್ತರ ಕನ್ನಡ: ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದು ಧನ್ಯನಾಗಿದ್ದೇನೆ ಎಂದು ಉಪ ರಾಷ್ಟ್ರಪತಿ ಜಗದೀಪ ಧನಖರ್ ಹೇಳಿದ್ದಾರೆ.
ದಂಪತಿ ಸಮೇತ ಶಿರಸಿ ಮಾರಿಕಾಂಬಾ ದರ್ಶನ ಪಡೆದಿರುವ ಅವರು, ಭಾರತ ಮತ್ತು ಎಲ್ಲಾ ಸಹವರ್ತಿ ನಾಗರಿಕರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದೆ. ದೇವಿಯ ಆಶೀರ್ವಾದವು ನಮ್ಮೆಲ್ಲರ ಮೇಲಿರಲಿ ಮತ್ತು ತಾಯಿ ಸನ್ಮಾರ್ಗದಲ್ಲಿ ನಡೆಸಲಿ ಎಂದು ಹೇಳಿದ್ದಾರೆ.