ಶಿಕ್ಷಣ ಜಗತ್ತನೇ ಬದಲಾಯಿಸಬಲ್ಲ ಅಸ್ತ್ರ

0
61

ದೇವರು ನಮಗೆ ಕೊಟ್ಟಿರುವುದು ಎರಡೇ ಆಯ್ಕೆ – ಒಂದು ಕೊಟ್ಟು ಹೋಗುವುದು, ಇನ್ನೊಂದು ಬಿಟ್ಟುಹೋಗುವುದು.

ಕನಕಪುರ: ನಾವು ಸದಾ ಸಮಾಜಕ್ಕೆ ಉಪಕಾರಿಯಾಗಿ ಬದುಕಬೇಕು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ
ಕನಕಪುರದ ಗಾಂಧಿ ಎಂದೇ ಕರೆಯಲ್ಪಡುವ ಪೂಜ್ಯ ಶ್ರೀ ಎಸ್. ಕರಿಯಪ್ಪನವರ 125ನೇ ಜನ್ಮದಿನೋತ್ಸವ ಮತ್ತು 45ನೇ ಪುಣ್ಯಸ್ಮರಣೆ ಅಂಗವಾಗಿ, ಕನಕಪುರದ ರೂರಲ್ ಎಜುಕೇಶನ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನೂತನ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ, ಮಾತನಾಡಿದ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂದು ಕರಿಯಪ್ಪನವರು ಆರ್.ಇ.ಎಸ್. ವಿದ್ಯಾಸಂಸ್ಥೆಯನ್ನು ಕಟ್ಟಿದ್ದಾರೆ. ಹೂವಿನ ಸುಗಂಧ ಎಲ್ಲಾ ಕಡೆ ಪಸರಿಸುವಂತೆ, ಜ್ಞಾನದ ಸುಗಂಧವನ್ನು ಶ್ರೀ ಎಸ್. ಕರಿಯಪ್ಪನವರು ಹಬ್ಬಿದ್ದಾರೆ. ರಾಮನನ್ನು ಜಗತ್ತು ನೆನಪಿಟ್ಟುಕೊಂಡಂತೆ, ಕರಿಯಪ್ಪನವರ ಸೇವೆಗಳಿಂದ ಅವರನ್ನು ಸಮಾಜ ನೆನಪಿಟ್ಟುಕೊಂಡಿದೆ.

ದೇವರು ನಮಗೆ ಕೊಟ್ಟಿರುವುದು ಎರಡೇ ಆಯ್ಕೆ – ಒಂದು ಕೊಟ್ಟು ಹೋಗುವುದು, ಇನ್ನೊಂದು ಬಿಟ್ಟುಹೋಗುವುದು. ‘ಪರೋಪಕಾರಾರ್ಥಂ ಇದಂ ಶರೀರಂ’‌ ಎಂಬಂತೆ ನಾವು ಜೀವಿಸಬೇಕು. ನಾನು 25 ಎಕರೆ ಜಮೀನನ್ನು ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ದಾನ ಮಾಡಿದ್ದೇನೆ. ಒಂದಿಷ್ಟು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದೇನೆ. ನಾವು ಸದಾ ಸಮಾಜಕ್ಕೆ ಉಪಕಾರಿಯಾಗಿ ಬದುಕಬೇಕು ಎಂದರು

Previous articleಪೂಜ್ಯರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಸ್ಕೃತಿ ನನ್ನದಲ್ಲ
Next articleದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಉದ್ಘಾಟಿಸಿದ ಮೋದಿ