ಶಾಸಕ ಪೂಂಜ ಗಡಿಪಾರಿಗೆ ಒತ್ತಾಯ

ಮಂಗಳೂರು: ಕೋಮು ಪ್ರಚೋದನಕಾರಿ ಭಾಷಣ, ಗುಂಪು ಘರ್ಷಣೆ, ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ಶಾಸಕ ಹರೀಶ್ ಪೂಂಜ ವಿರುದ್ಧ 9 ಪ್ರಕರಣಗಳಿವೆ. ಕೋಮು ದ್ವೇಷದ ಮೂಲಕ ಶಾಂತಿ ಕದಡುವ ಅವರ ಮೇಲಿನ ಪ್ರಕರಣಗಳು ಗಂಭೀರವಾಗಿದ್ದು, ರೌಡಿಶೀಟರ್ ಎಂದು ಪರಿಗಣಿಸಿ ಜಿಲ್ಲೆಯಿಂದ ಗಡಿಪಾರು ಮಾಡಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.
ಬೆಳ್ತಂಗಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪೂಂಜ ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ. ಸಾವಿನ ಮನೆಗೆ ಹೋಗಿ ರಾಜಕೀಯ ಮಾಡುತ್ತಿದ್ದಾರೆ. ಫರಂಗಿಪೇಟೆಯಲ್ಲಿ ಬಾಲಕ ನಾಪತ್ತೆಯಾದಾಗ ತೆಕ್ಕಾರು ದೇವಸ್ಥಾನದ ಧಾರ್ಮಿಕ ವೇದಿಕೆಯಲ್ಲಿ ದ್ವೇಷ ಭಾಷಣದ ಮೂಲಕ ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು.