ಶಾಲೆ ಮುಚ್ಚಲು ಹೊರಟ ಸರಕಾರ

0
14

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ನಡೆಸಲು ದುಡ್ಡಿಲ್ಲದೆ, ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಭ್ರಷ್ಟಾಚಾರ, ಅವ್ಯವಹಾರದಲ್ಲಿ ಮುಳುಗಿ ರಾಜ್ಯದ ಬೊಕ್ಕಸವನ್ನ ಬರಿದು ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ, ಈಗ ಸರ್ಕಾರಿ ಶಾಲೆಗಳನ್ನು ನಡೆಸಲು ದುಡ್ಡಿಲ್ಲದೆ, 4,398 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸಿಎಂ ಸಿದ್ದಾರಮಯ್ಯನವರೇ, ಬಡವರನ್ನ, ಬಡವರ ಮಕ್ಕಳನ್ನ ಕಂಡರೆ ನಿಮಗೆ ಯಾಕಿಷ್ಟು ತಾತ್ಸಾರ? ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಮೂಲಕ ಬಡ ಮಕ್ಕಳ ಭವಿಷ್ಯವನ್ನ ಕತ್ತಲೆಗೆ ನೂಕಲು ಹೊರತಿದ್ದೀರಲ್ಲ, ನಿಮಗೆ ಮನುಷ್ಯತ್ವವೇ ಇಲ್ಲವೇ? ನಿಮ್ಮ ಕೈಯಲ್ಲಿ ಆಡಳಿತ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ. ಕುರ್ಚಿಗೆ ಅಂಟಿಕೊಂಡು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದಿದ್ದಾರೆ.

Previous articleಪಿಎಸ್​ಐ ಸಾವು: ಕುಟುಂಬಸ್ಥರಿಂದ ಗಂಭೀರ ಆರೋಪ
Next articleಪೆನ್ನು ಕದ್ದ ಬಾಲಕ: ಹಲ್ಲೆ ನಡೆಸಿದ ಗುರೂಜಿ…