ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಹಳಿಯಾಳ ಗ್ರಾಮದಲ್ಲಿ ಶಾಲೆಯೊಂದರಲ್ಲಿ ಕಲ್ಲಿನಿಂದ ಜಜ್ಜಿ ಸದ್ದಾಂ ( ಶರೀಫಸಾಬ.) ಅರಿಸಣಗಿರಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಹಳಿಯಾಳ ಗ್ರಾಮದ ನಿವಾಸಿಯಾದ ಶರೀಫಸಾಬ ಅರಸಣಗಿರಿಯನ್ನು ಗ್ರಾಮದ ಶಾಲೆಯೊಂದರಲ್ಲಿ ದುಷ್ಕರ್ಮಿಗಳು ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ದೂರು ದಾಖಲಿಸಿಕೊಂಡು ಕೊಲೆಗೆ ಕಾರಣದ ಜೊತೆಗೆ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.