ಹಾಸನ: ನಗರದದ ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ.
ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್‌ಗೆ ಇಮೇಲ್ ಸಂದೇಶ ಬಂದಿದ್ದು, ಹಾಸನದ ವಿಜಯನಗರ, ಇಂಡಸ್ಟ್ರಿಯಲ್ ಏರಿಯಾ ಮತ್ತು ಕೆ ಆರ್ ಪುರಂ ಶಾಲೆಗಳ ಕಟ್ಟಡಗಳಿಗೆ ಬಾಂಬ್ ಇಟ್ಟು ಒಂದು ಗಂಟೆಗೆ ಕಟ್ಟಡ ಸ್ಪೋಟಿಸುವುದಾಗಿ ದುಷ್ಕರ್ಮಿಯೋಬ್ಬ ಇ-ಮೇಲ್ ಸಂದೇಶ ಕಳುಹಿಸಿದ್ದಾನೆ. ವಿದ್ಯಾಸೌಧ ಶಾಲೆ ಹಾಗೂ ಕಿಡ್ಸ್ ಶಾಲೆ ಮಂಜೇಗೌಡ ಎಂಬವರಿಗೆ ಸೇರಿದ್ದು, ಈ ಕುರಿತು ಹಾಸನ ನಗರ ಗ್ರಾಮಾಂತರ ಠಾಣೆಗೆ ಪ್ರಾಂಶುಪಾಲರು ದೂರು ನೀಡಿದ್ದರು. ತಡರಾತ್ರಿಯೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಇ-ಮೇಲ್ ಸಂದೇಶ ರವಾನಿಸಿದ್ದಾನೆ.