ಮಕ್ಕಳನ್ನು ಬೇಕಾ ಬಿಟ್ಟಿ ವಾಹನಗಳಲ್ಲಿ ಶಾಲೆಗೆ ಕಳುಹಿಸುವ ಮುನ್ನ ಹುಷಾರ್.
ಯಾದಗಿರಿ: ಖಾಸಗಿ ಶಾಲಾ ವಿಧ್ಯಾರ್ಥಿಗಳ ಕರೆದೊಯ್ಯುತ್ತಿದ ಅಟೋ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪೂರ ನಗರದಲ್ಲಿ ಈ ಘಟನೆ ಸಂಭವಿಸಿದೆ, ತಹಶಿಲ್ದಾರ ಕಚೇರಿ ಬಳಿ ಡಿಡಿಯು ವಿಧ್ಯಾಸಂಸ್ಥೆಗೆ ಸೇರಿದ ಶಾಲಾ ಮಕ್ಕಳನ್ನ ಸಾಗಿಸುತ್ತಿದ್ದ ಟಂಟಂ ವಾಹನ, ಮುಂದೆ ಬೈಕ್ ಬಂದಿದ್ದರಿಂದ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ, ಅಪಘಾತದಲ್ಲಿ ಓರ್ವ ವಿಧ್ಯಾರ್ಥಿಗೆ ಕೈ ಗಂಬೀರವಾಗಿದ್ದು, ಮೂರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಗಾಯಗೊಂಡ ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋದಲ್ಲಿ 20 ಕ್ಕೂ ಅಧಿಕ ಮಕ್ಕಳನ್ನು ಕರೆದ್ಯೋಯುವಾಗ ಈ ಘಟನೆ ನಡೆದಿದ್ದು, ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತಿಚೆಗೆ ಮಾನ್ವಿ ವಿಧ್ಯಾರ್ಥಿಗಳ ದುರಂತ ಮಾಸುವ ಮುನ್ನವೆ ಮತ್ತೊಂದು ಅವಘಡ ಸಂಭವಿಸಿದೆ,