ಶಾಲಾ ವಾಹನ ಹರಿದು ಬಾಲಕ ಸಾವು

0
15

ಬಾಗಲಕೋಟೆ: ಶಾಲಾ ಬಸ್ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ಮುಧೋಳ ತಾಲೂಕಿನ ಬರಗಿ ಕ್ರಾಸ್ ಬಳಿ ಶನಿವಾರ ಜರುಗಿದೆ.
ಅಭಿನಂದನ್ ಹೊಸೂರು(೪) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಶಾಲೆಗೆ ಹೋಗಬೇಕಿದ್ದ ಬಾಲಕ ಹೆಣವಾಗಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಅಭಿನಂದನ್ ತಂದೆ ಸಂಗಣ್ಣ ಹೊಸೂರ ಅವರಿಗೆ ನಾಲ್ವರು ಮಕ್ಕಳಿದ್ದು, ಈ ಪೈಕಿ ಮೂವರು ಪುತ್ರಿಯರಿದ್ದಾರೆ. ಅಭಿನಂದನ್ ಒಬ್ಬನೇ ಗಂಡು ಮಗುವಾಗಿದ್ದು, ಪಾಲಕರ ಸಂಕಷ್ಟ ಹೇಳತೀರದಾಗಿದೆ. ಇನ್ನು ಶನಿವಾರ ರಾತ್ರಿವರೆಗೂ ಪೊಲೀಸರು ಈ ಸಂಬಂಧ ಪ್ರಕರಣವೆ ದಾಖಲಾಗಿಲ್ಲ ಎಂದು ಹೇಳಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.

Previous articleಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ
Next articleಕಲುಷಿತ ನೀರು ಸೇವಿಸಿ ೧೭ ವಿದ್ಯಾರ್ಥಿಗಳು ಅಸ್ವಸ್ಥ