ಶಾಲಾ ಬಸ್ ಅಪಘಾತ: ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ರಾಯಚೂರು; ಖಾಸಗಿ ಶಾಲಾ ವಾಹನ ಸಾರಿಗೆ ಸಂಸ್ಥೆಯ ಬಸ್ ಮಧ್ಯ ಡಿಕ್ಕಿಯಾದ ಪರಿಣಾಮ ಮೂರು ನಾಲ್ಕು ವಿದ್ಯಾರ್ಥಿಗಳು ಗಂಭಿವಾದ ಘಟನೆ ಮಾನ್ವಿ ತಾಲ್ಲೂಕಿನ ಕಪಗಲ್ ಹಳ್ಳದ ಸಮೀಪ ಗುರುವಾರ ಬೆಳಿಗ್ಗೆ ನಡೆದಿದೆ.
ಮಾನ್ವಿಯ ಲೋಯೊಲಾ ಶಾಲೆ ಬಸ್ ಮತ್ತು ಸಾರಿಗೆ ಬಸ್‌ ಡಿಕ್ಕಿವಾಹನ ಹೊಡೆದ ಘಟನೆಯಲ್ಲಿ ಮೂರು ವಿದ್ಯಾರ್ಥಿಗಳ ಕಾಲು ಕಟ್ ಆಗಿದೆ. ಉಳಿದ ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ರಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ ಶಾಲಾ ಬಸ್ ಮಕ್ಕಳನ್ನ ಕರೆದುಕೊಂಡು ಮಾನ್ವಿಗೆ ಆಗಮಿಸುತ್ತಿತ್ತು. ಸಾರಿಗೆ ಸಂಸ್ಥೆ ಬಸ್ ಮಾನ್ವಿ ಯಿಂದ ರಾಯಚೂರಿ ಹೊರಟಿದ್ದು, ವಿದ್ಯಾರ್ಥಿಗಳ ಹೆಸರು ತಿಳಿದುಬಂದಿಲ್ಲ. ಮಾನ್ವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.