ಶಾಲಾ-ಕಾಲೇಜುಗಳಿಗೆ ಜಾತಿ, ಧರ್ಮ, ಪಕ್ಷ ಒಯ್ಯಬಾರದು

0
21

ವಿಜಯಪುರ: ಹಿಜಾಬ್ ವಿಚಾರ ಕೋರ್ಟ್ ನಲ್ಲಿದೆ. ಹಿಜಾಬ್ ಬ್ಯಾನ್ ಆಗುವ ಮುಂಚೆ ಸೌಹಾರ್ದಯುತವಾಗಿ ಪರಸ್ಪರ ವಿಶ್ವಾಸ, ಹೊಂದಾಣಿಕೆ ಮೂಲಕ ಇತ್ತು. ಅದನ್ನು ಈಗ ಕದಡಿಸಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಜಾತಿ, ಧರ್ಮ, ಪಕ್ಷ ಒಯ್ಯಬಾರದು. ಮುಂಚಿತವಾಗಿ ಹೊಂದಾಣಿಕೆ ಮೇಲಿದ್ದನ್ನು ಕದಲಿಸಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಮೇಲೆ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ವಿಚಾರ ನ್ಯಾಯಾಲಯದಲ್ಲಿದೆ. ಅದನ್ನು ಕಾನೂನಾತ್ಮಕವಾಗಿ ವಿಚಾರ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್ ಎಂದು ಯತ್ನಾಳ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಮೂರನೇಯ ಟಿಪ್ಪು ಸುಲ್ತಾನ್ ಯತ್ನಾಳ ಎಂದು ಟಾಂಗ್ ಕೊಟ್ಟರು.
ಈ ಹಿಂದೆ ಯತ್ನಾಳ ಟಿಪ್ಪು ಸುಲ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳಿವೆ. ಆ ಫೋಟೋವನ್ನು ನನಗೆ ಮಾಧ್ಯಮದವರೇ ಹಾಕಿದ್ದಾರೆ. ನಾವು ಯತ್ನಾಳರನ್ನು ಮೂರನೇ ಟಿಪ್ಪು ಸುಲ್ತಾನ್ ಎಂದು ಕರೆಯುತ್ತೇವೆ. ಎಲ್ಲವೂ ನಿಮ್ಮ ಬಳಿ ಇದ್ದರೂ ನಮ್ಮ ಬಾಯಿಂದ ಹೇಳಿಸುತ್ತಿರಿ ಎಂದು ಮಾಧ್ಯಮದವರಿಗೆ ಸಚಿವ ಎಂ. ಬಿ. ಪಾಟೀಲ್ ಪ್ರಶ್ನೆ ಮಾಡಿದರು.

Previous articleಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸುವ ಉಸ್ತುವಾರಿ ಕೊಟ್ಟಂತಿದೆ
Next articleರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯ