ಪಾಲಕರು ಶಿಕ್ಷಣಕ್ಕೆ ಆದ್ಯತೆ ನೀಡಲಿ
ಕೊಪ್ಪಳ: ಪಾಲಕರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರ ಸಮೀಪದ ಭಾಗ್ಯನಗರದ ಶಂಕರಾಚಾರ್ಯ ಮಠದ ಆವರಣದಲ್ಲಿ ಶನಿವಾರ ಶಾರದಾಂಬಾ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜಿಸಿ ಶಾರದಾ ಸೌರಭ-ದಶಕದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಪ್ರಧಾನ ದೇಶ ನಮ್ಮದು. ಬಿಎಸ್ಸಿ ಮಾಡಿ, ಕೃಷಿಕನಾಗಬೇಕು ಎಂದು ಭಯಸುವುದಿಲ್ಲ. ಕೇವಲ ಎಂಜಿನಿಯರ್ ಮತ್ತು ಎಂಬಿಬಿಎಸ್ ಮೊರೆ ಹೋಗುತ್ತಿದ್ದೇವೆ. ಇದು ಸರಿಯಲ್ಲ. ಮೌಲ್ಯಾಧಾರಿತ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಪಾಲಕರಿಗೆ ಬಹಮಾನ ವಿತರಿಸಲಾಯಿತು. ಅತಿಹೆಚ್ಚು ಅಂಕ ಮತ್ತು ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಟ್ಟಣ ಪಂಚಾಯಿತಿಯ ಸದಸ್ಯರಿಗೆ ಸನ್ಮಾನಿಸಲಾಯಿತು.
ಶಂಕರಾಚಾರ್ಯ ಮಠದ ಶಿವಪ್ರಕಾಶನಾಂದ ಸ್ವಾಮೀಜಿ, ಶಿವರಾಮಕೃಷ್ಣಾನಂದ ಭಾರತಿ ಸ್ವಾಮೀಜಿ, ಶಿವರಾಮಾನಂದ ಭಾರತಿ ಸ್ವಾಮೀಜಿ, ಜಮಖಂಡಿಯ ಕೃಷ್ಣಾನಂದ ಅವಧೂತ, ಜ್ಞಾನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ, ನಾಗೂಸಾ ಮೇಘರಾಜ್, ಜವಹರಲಾಲಸಾ ಅಂಟಾಳಮರದ್, ಮೋಹನ್ ಮೇಘರಾಜ್, ರಾಘವೇಂದ್ರ ಕಠಾರೆ, ಅಂಕಯ್ಯ, ಗ್ಯಾನೇಶ ಹ್ಯಾಟಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಪರಶುರಾಮ ನಾಯಕ, ರಮೇಶ ಹ್ಯಾಟಿ, ಗವಿಸಿದ್ದಪ್ಪ ಮಗಿಮಾವಿನಹಳ್ಳಿ, ಮಂಜುಳಾ ಶ್ಯಾವಿ, ರೋಷನ್ ಅಲಿ, ಗವಿಸಿದ್ದಯ್ಯ, ಗೌರಮ್ಮ ಉಂಕಿ ಇದ್ದರು