ಶಸ್ತ್ರತ್ಯಾಗ ಮಾಡಿಲ್ಲ, ಧರ್ಮಯುದ್ಧ ಮುಂದುವರಿಯಲಿದೆ…

0
13

ಹುಬ್ಬಳ್ಳಿ: “ನಾನು ಶಸ್ತ್ರತ್ಯಾಗ ಮಾಡಿಲ್ಲ, ಧರ್ಮಯುದ್ಧ ಮುಂದುವರಿಸುವೆ” ಎಂದು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ನಾಮಪತ್ರ ಹಿಂಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುಗಳ ಆದೇಶದ ಮೇರೆಗೆ ನಾಮಪತ್ರ ವಾಪಾಸ್ ಪಡೆದ್ದಿದ್ದೇನೆ. ಅದರ ಹೊರತಾಗಿ ಯಾವುದೇ ಪಕ್ಷಗಳ ಮುಖಂಡರ ಒತ್ತಡದ ಮೇರೆಗೆ ವಾಪಸ್ ಪಡೆದಿಲ್ಲ ಎಂದು ತಿಳಿಸಿದರು.
ನನಗೆ ಯಾರಾದರೂ ದುಡ್ಡು ಕೊಟ್ಟಿದ್ದು ನಿಜವೇ ಆದರೆ ನೇರವಾಗಿ ಬಂದು ಹೇಳಲಿ. ಕೋಟಿಗಟ್ಟಲೆ ಹಣ ಕೊಟ್ಟಿರೋದಾಗಿ ಹೇಳ್ತಾರೆ. ಹಾಗಾದ್ರೆ ಅವ್ರಿಗೆ ಹಣ ಎಲ್ಲಿಂದ ಬಂತು ಅಂತ ಹೇಳಲಿ. ನನಗೆ ಹಣ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ ಮುಂದೆ ಬರಲಿ ಎಂದು ಸವಾಲು ಹಾಕಿದರು.

Previous articleಬೆಳಗಾವಿ ಅಂತಿಮ ಕಣದಲ್ಲಿ ೧೩ ಅಭ್ಯರ್ಥಿಗಳು
Next articleಬಿಜೆಪಿಯಿಂದ ಈಶ್ವರಪ್ಪ ಉಚ್ಚಾಟನೆ