ಗಂಗಾವತಿ: ತಾಲೂಕಿನ ಹಳೆನಾಗನಹಳ್ಳಿ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತದ ಗದ್ದೆಯಲ್ಲಿಯೇ ನಡೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಇದೆ. ಗ್ರಾಮದ ಹೊರವಲಯದಲ್ಲಿ ಸ್ಮಶಾನ ಇದೆ. ರಸ್ತೆ ಸಂಪರ್ಕ ಇಲ್ಲ. ಭತ್ತದ ಗದ್ದೆಗಳಲ್ಲಿ ಶವ ಹೊತ್ತುಕೊಂಡು ಹೋಗಬೇಕಿದೆ.
ಇತ್ತೀಚೆಗೆ ಅಂಬರೀಶ್ ಎನ್ನುವ ವೃದ್ಧ ಮೃತಪಟ್ಟಿದ್ದರು. ಭತ್ತದ ಗದ್ದೆಯಲ್ಲಿ ನಡೆದುಕೊಂಡು ಹೋಗಿ ವೃದ್ಧನ ಶವ ಸಂಸ್ಕಾರ ಮಾಡಬೇಕಾಯಿತು. ಆದ್ದರಿಂದ ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೂ, ಯಾವುದೇ ಪ್ರಯೋಜವಾಗಿಲ್ಲ. ಅರವತ್ತು ವರ್ಷಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.