ಬೆಂಗಳೂರು: ಶಕ್ತಿ ಯೋಜನೆ ಅಡಿ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರು ಇನ್ನು ಮುಂದೆ ಆಧಾರ್ ಕಾರ್ಡ್ ಬದಲು ಸ್ಮಾರ್ಟ್ ಕಾರ್ಡ್ ತೋರಿಸಿ ಶೂನ್ಯ ಮೊತ್ತದ ಟಿಕೆಟ್ ಪಡೆದು ಪ್ರಯಾಣಿಸಬೇಕು.
ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ಅಗತ್ಯ. ಮಹಿಳೆಯರು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಲೇ ಇಲಾಖೆ ಸ್ಮಾರ್ಟ್ಕಾರ್ಡ್ ಅಗತ್ಯತೆಯನ್ನು ಹೇಳಿತ್ತು. ಆದರೆ ಸಮಯದ ಅಭಾವದಿಂದ ಇಲಾಖೆ ಸ್ಮಾರ್ಟ್ ಕಾರ್ಡ್ ರಚನೆಗೆ ಮುಂದಾಗಲಿಲ್ಲ. ಯೋಜನೆ ಜಾರಿಗೆ ಬಂದು ೧೧ ತಿಂಗಳು ಕಳೆದ ನಂತರ ಸ್ಮಾರ್ಟ್ಕಾರ್ಡ್ ಜಾರಿಗೊಳಿಸಿದೆ.
ಪಿಂಕ್ ಟಿಕೆಟ್:
ಮಹಿಳೆಯರ ಉಚಿತ ಪ್ರಯಾಣಕ್ಕೆ ಪಿಂಕ್ ಟಿಕೆಟ್ ನೀಡಲು ಇಲಾಖೆ ಮುಂದಾಗಿದೆ. ಈಗ ಬಿಳಿ ಬಣ್ಣದ ಟಿಕೆಟ್ ನೀಡಲಾಗುತ್ತಿದ್ದು, ಇದನ್ನು ಮುಂದೆ ಪಿಂಕ್ ಬಣ್ಣಕ್ಕೆ ಬದಲಾಯಿಸಲು ಇಲಾಖೆ ನಿರ್ಧರಿಸಿದೆ. ಎಲ್ಲಿಂದ ಎಲ್ಲಿಗೆ ಪ್ರಯಾಣದ ಮಾಹಿತಿಯನ್ನು ನಮೂದಿಸಿ ಶೂನ್ಯ ಮೊತ್ತದ ಟಿಕೆಟ್ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಲಗೇಜ್ ೩೦ ಕೆಜಿ ಮೀರಿದರೆ ಹಣ ಪಾವತಿ
ಮಹಿಳೆಯರಿಗೆ ಪ್ರಯಾಣ ಉಚಿತವಾದರೂ ಮಹಿಳೆಯರು ಸಾಗಿಸುವ ಲಗೇಜ್‌ಗೆ ದರವನ್ನು ಕೆಎಸ್‌ಆರ್‌ಟಿಸಿ ನಿಗದಿಪಡಿಸಿದೆ. ೩೦ ಕೆ.ಜಿ. ತೂಕದವರೆಗೂ ಲಗೇಜ್‌ಗೆ ವಿನಾಯಿತಿ ಇದೆ. ತೂಕ ೩೦ ಕೆಜಿ ಮೀರಿದರೆ ಟಿಕೆಟ್ ಪಡೆಯಬೇಕು.