ವೋಟಿಗಾಗಿ ತೋರುವ ಪ್ರೀತಿ, ಭಕ್ತಿ ಜಗತ್ತಿಗೆ ತಿಳಿದಿರುವ ವಿಷಯ

0
6

ಬೆಂಗಳೂರು: ಅಂಬೇಡ್ಕರ್‌, ಬಸವಣ್ಣ, ವಾಲ್ಮೀಕಿ ಮಹರ್ಷಿಗಳ ಮೇಲೆ ವೋಟಿಗಾಗಿ ತೋರುವ ಪ್ರೀತಿ ಹಾಗೂ ಭಕ್ತಿ ಜಗತ್ತಿಗೆ ತಿಳಿದಿರುವ ವಿಷಯ ಎಂದು ಕರ್ನಾಟಕ ಕಾಂಗ್ರೆಸ್‌ಗೆ ರಾಜ್ಯ ಬಿಜೆಪಿ ಚಾಟಿ ಬೀಸಿದೆ.
ಕಚೇರಿಯಿಂದ ಅಂಬೇಡ್ಕರ್‌, ವಾಲ್ಮೀಕಿ ಫೋಟೋ ತೆಗೆಸಿದ ಆರೋಪ ಕುರಿತು ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಪೋಸ್ಟ್‌ ಮಾಡಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ವೇದಿಕೆ ಮೇಲೆ ತೆಗೆದುಕೊಂಡು ಬರುವ ವಿಡಿಯೋ ತುಣುಕನ್ನು ಇಟ್ಟುಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ತೇಜೋವಧೆ ಮಾಡುವ ಕಾರಣದಿಂದ ಈ ರೀತಿಯ ಕೃತ್ಯವನ್ನು ಮಾಡಿರುವುದು ಅತ್ಯಂತ ಖಂಡನೀಯ.
ಡಿಯರ್‌ ಕರ್ನಾಟಕ ಕಾಂಗ್ರೆಸ್‌ , ನಿಮಗೆ ಅಂಬೇಡ್ಕರ್‌, ಬಸವಣ್ಣ, ವಾಲ್ಮೀಕಿ ಮಹರ್ಷಿಗಳ ಮೇಲೆ ವೋಟಿಗಾಗಿ ತೋರುವ ಪ್ರೀತಿ ಹಾಗೂ ಭಕ್ತಿ ಜಗತ್ತಿಗೆ ತಿಳಿದಿರುವ ವಿಷಯ.

➡️ ಎಂಪಿ ಚುನಾವಣೆಯಲ್ಲಿ ಅಂಬೇಡ್ಕರ್‌ಗೆ ಒಳ ಏಟು ಕೊಟ್ಟಿದ್ದು ಕಾಂಗ್ರೆಸ್
➡️ 2 ಬಾರಿ ಸ್ಪರ್ಧಿಸಿದಾಗಲೂ ಅಪಪ್ರಚಾರ ಮಾಡಿ ಸೋಲಿಸಿದ್ದು ಕಾಂಗ್ರೆಸ್
➡️ ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೂ ಜಾಗ ನೀಡದೆ ಅಪಮಾನಿಸಿದ್ದು ಕಾಂಗ್ರೆಸ್‌
➡️ ರಾಷ್ಟ್ರಕ್ಕೆ ಅಂಬೇಡ್ಕರ್‌ ನೀಡಿದ ಕೊಡುಗೆಯನ್ನು ನಿರ್ಲಕ್ಷಿಸಿದ್ದು ಕಾಂಗ್ರೆಸ್‌
➡️ ಸಂವಿಧಾನ ಶಿಲ್ಪಿಗೆ ಭಾರತ ರತ್ನ ಪ್ರಶಸ್ತಿ ಕೂಡ ನೀಡದೆ ಅಗೌರವಿಸಿದ್ದು ಕಾಂಗ್ರೆಸ್‌
➡️ ಸಂಸತ್ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೂ ಅವಕಾಶ ನೀಡದಿರುವುದು ಕಾಂಗ್ರೆಸ್
➡️ ಭಕ್ತಿ ಭಂಡಾರಿ ಬಸವಣ್ಣನವರ ಆಶಯಕ್ಕೆ ತದ್ವಿರುದ್ಧವಾಗಿ ಸರ್ಕಾರವನ್ನು ಮುನ್ನಡೆಸುತ್ತಿರುವುದು ಕಾಂಗ್ರೆಸ್
➡️ 60 ವರ್ಷ ಆಳಿದರೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸದ್ದಿದ್ದದ್ದು ಕಾಂಗ್ರೆಸ್.

ಬಿಜೆಪಿಯು ಮಹಾನ್ ನಾಯಕರುಗಳಿಗೆ ಸದಾ ಗೌರವ ನೀಡುತ್ತಲೇ ಬಂದಿದೆ ಉದಾಹರಣೆಗೆ,

➡️ ಪಂಚತೀರ್ಥ ಯೋಜನೆಯಡಿ ಬಾಬಾ ಸಾಹೇಬರ ಸ್ಮಾರಕಗಳ ಅಭಿವೃದ್ಧಿಗೆ 2 ಸಾವಿರ ಕೋಟಿ ವೆಚ್ಚ
➡️ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡುವಲ್ಲಿ ಬಿಜೆಪಿ ಮಹತ್ವದ ಪಾತ್ರ
➡️ ಸಂವಿಧಾನ ಅಂಗೀಕರಿಸಲ್ಪಟ್ಟ ನವೆಂಬರ್‌ 26 ಸಂವಿಧಾನ ದಿನವಾಗಿ ಘೋಷಣೆ
➡️ ದಲಿತ ಸಮುದಾಯದ ನಾಯಕ ಶ್ರೀ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ
➡️ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿಸಿ ಅದಿವಾಸಿ ಸಮುದಾಯಕ್ಕೆ ಮೊತ್ತ ಮೊದಲ ಅಂಗೀಕಾರ ದೊರಕಿಸಿಕೊಟ್ಟ ಹಿರಿಮೆ
➡️ ವಾಲ್ಮೀಕಿ ಜಯಂತಿಯನ್ನು ಮೊಟ್ಟಮೊದಲಿಗೆ ಆಚರಿಸಿದ್ದು ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ
➡️ ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಬಸವಣ್ಣನವರ ಆದರ್ಶದಂತೆ ಆಡಳಿತವನ್ನು ನಡೆಸುತ್ತಿದೆ.

ಅಂಬೇಡ್ಕರ್‌, ಬಸವಣ್ಣ, ವಾಲ್ಮೀಕಿ ಮಹರ್ಷಿಗಳು ಸೇರಿದಂತೆ ದೇಶ ಕಟ್ಟಿದ ಇತರ ಮಹಾನ್‌ ನಾಯಕರಿಗೆ ನಮ್ಮ ಹೃದಯದಲ್ಲಿ ಶಾಶ್ವತ ಸ್ಥಾನವಿದೆ ಎಂದಿದ್ದಾರೆ.

Previous articleಪ್ರಿಯಾಂಕ್ ಅವರಿಂದ ದುರ್ಬುದ್ಧಿ ಪ್ರದರ್ಶನ: ಶ್ರೀರಾಮುಲು
Next articleರಾಮೇಶ್ವರಂ ಕೆಫೆ‌ ಬಾಂಬ್ ಸ್ಫೋಟ: ಶಂಕಿತರು 10 ದಿನ ಎನ್ಐಎ ಕಸ್ಟಡಿಗೆ