ವೈಷ್ಣೋದೇವಿ ದೇವಸ್ಥಾನ ಸಂಸ್ಥಾಪಕ‌ ದೇವಪ್ಪಜ್ಜ ಹತ್ಯೆ ಪ್ರಕರಣ: ಆರೋಪಿ ಬಂಧನ

0
8


ಹುಬ್ಬಳ್ಳಿ: ವೈಷ್ಣೋದೇವಿ ದೇವಸ್ಥಾನದ ಸಂಸ್ಥಾಪಕನನ್ನು ದೇವಸ್ಥಾನದ ಹಿಂಬಾಗದಲ್ಲಿಯೇ ದುಷ್ಕರ್ಮಿಗಳು ಚಾಕುವಿಂದ ಬರ್ಬರವಾಗಿ ಇರಿದು ಹತ್ಯೆಗೈದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು, ೨೪ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದ ದೇವೇಂದ್ರಪ್ಪ ವನಹಳ್ಳಿ (ದೇವಪ್ಪಜ್ಜಾ) ಎಂಬುವರನ್ನು ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಹತ್ಯೆ ಮಾಡಲಾಗಿತ್ತು.
ಪ್ರಕರಣ ದಾಖಲಾದ ತಕ್ಷಣ ಆರೋಪಿ‌ಪತ್ತೆಗೆ ಎಂಟು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿಯ ಸುಳಿವರಿತ ಪೊಲೀಸರು ಕಮರಿಪೇಟೆಯ ಆರೋಪಿ ಸಂತೋಷ ಬೋಜಗಾರ (೪೪) ಎಂಬಾತನನ್ನು ಚನ್ನಮ್ಮ ವೃತ್ತದ ಹತ್ತಿರ ಬಂಧಿಸಲಾಗಿದೆ. 2022 ರಲ್ಲೂ ತಾನೆ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ ಹಲವಾರು ವರ್ಷಗಳಿಂದ ತನ್ನ ಮನೆಯವರಿಗಾದ ತೊಂದರೆಗೆ ದೇವಪ್ಪಜ್ಜನೇ ಕಾರಣ ಎಂದು ಹೊಂಚು ಹಾಕಿದ್ದ ಎನ್ನಲಾಗಿದೆ. ೧೯೯೨ ರಿಂದಲೇ ಈತನಿಗೆ ಅನ್ಯಾಯವಾಗಿದೆ ಎನ್ನಲಾಗಿದೆ. ಆರೋಪಿತನ ಕುಟುಂಬ ಸಂಬಂಧಿಕರೇ ದೇವಪಜ್ಜನಿಂದ ಪೂಜೆ ಮಾಡಿಸಿ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೊಲೆ ಮಾಡಲು ೨೦೨೨ ರಲ್ಲಿ ಹೋದಾಗ ಚಾಕು ಮುರಿದ ಪರಿಣಾಮ ಗಂಭೀರ ಗಾಯಗಳು ಆಗಿರಲಿಲ್ಲ. ಈಗ ಕೊಲೆ ಮಾಡಲೆಂದೆ ವಿಶೇಷ ಚಾಕು ಖರೀದಿಸಿದ್ದ ಎನ್ನಲಾಗಿದೆ.

Previous articleಶಿರೂರು ಗುಡ್ಡ ಕುಸಿತ ಪ್ರಕರಣ: 8 ದಿನಗಳ ಬಳಿಕ ಪತ್ತೆಯಾದ ಸಣ್ಣಿ ಗೌಡ ಮೃತದೇಹ
Next articleಖ್ಯಾತ ಜನಪದ ಗಾಯಕ, ಸಾಹಿತಿ ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ ನಿಧನ