ವಿಜಯನಗರ: ವೈದ್ಯರ ನಿರ್ಲಕ್ಷ್ಯದಿಂದ ಸೂಕ್ತ ಚಿಕಿತ್ಸೆ ಸಿಗದೇ 5 ವರ್ಷದ ಮಗು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹೊಸಪೇಟೆ ತಾಲೂಕಿನ ಕಮಲಾಪುರದ ಅಂಬೇಡ್ಕರ್ ನಗರದ ಶಾಂತಪ್ಪ, ಶಂಕ್ರಮ್ಮ ದಂಪತಿಯ ಮಗು ಕುಶಾಲ್ ಐದು ವರ್ಷದ ಮಗು ಮೃತಪಟ್ಟಿರುವ ಮಗು. ಈ ಮುಂಚೆ ಜ್ವರದಿಂದ ಬಳಲುತ್ತಿದ್ದ ಕುಶಾಲ್‌ನಿಗೆ ಚಿಕಿತ್ಸೆ ನೀಡಲಾಗಿತ್ತು, ಇಂದು ಬೆಳಿಗ್ಗೆ ಜ್ವರ ಹೆಚ್ಚಿದ್ದು ಆಸ್ಪತ್ರೆಗೆ ಬಂದಾಗ ವೈದ್ಯರು ಚಿಕಿತ್ಸಾ ವಾರ್ಡ್‌ನಲ್ಲಿ ಯಾವುದೇ ವೈದ್ಯರು ಇರಲಿಲ್ಲ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಮಗುವಿಗೆ ಜ್ವರ ಹೆಚ್ಚಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿಯೂ ಮಗುವನ್ನು ತಪಾಸಣೆ ಮಾಡಿ ಸರ್ಕಾರಿ ಆಸ್ಪತ್ರೆಗೆ ವಾಪಾಸ್ ಕಳುಹಿಸಿದ್ದಾರೆ. ಆದರೆ ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಾಗಲೇ ಮಗುವಿಗೆ ಜ್ವರ ತೀವ್ರಗೊಂಡಿದ್ದು ಮಗು ಕೊನೆಯುಸಿರೆಳೆದಿದೆ.