ವೀರಯೋಧ ಮಹಾಂತೇಶ ಪಾರ್ಥಿವ ಶರೀರ ಬೆಳಗಾವಿಗೆ

0
19

ಬೆಂಗಳೂರು: ಗೋಕಾಕ್ ತಾಲೂಕಿನ ವೀರಯೋಧ ಮಹಾಂತೇಶ ಬ. ಹುಬ್ಬಳ್ಳಿ (31) ಅವರ ಪಾರ್ಥಿವ ಶರೀರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಆಗಮಿಸಿದ್ದ ಕುಟುಂಬಸ್ಥರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ಮಾಡಿ ಧೈರ್ಯ ತುಂಬಿದ ಸಚಿವರು, ಯೋಧನ ಆತ್ಮಕ್ಕೆ ಶಾಂತಿ ಕೋರಿದರು.
ಮಹಾಂತೇಶ ಅವರು ಅನಾರೋಗ್ಯದಿಂದ ದೆಹಲಿಯ ಆಸ್ಪತ್ರೆಯಲ್ಲಿ 2 ದಿನಗಳ ಹಿಂದೆ ನಿಧನರಾಗಿದ್ದಾರೆ. ಗೋಕಾಕ್ ತಾಲೂಕಿನ ಡುಮ್ಮಉರಬಿನಹಟ್ಟಿಯ ವೀರಯೋಧ ಮದ್ರಾಸ್ ಇಂಜಿನಿಯರಿಂಗ್ ಗ್ರುಪ್ (MEG) ನ ಪಂಜಾಬ್ ಯುನಿಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಮಹಾಂತೇಶ ಚಿಕ್ಕ ವಯಸ್ಸಿನಲ್ಲಿಯೇ ಮೃತರಾಗಿರುವುದು ದುರ್ದೈವದ ಸಂಗತಿ ಅವರ ನಿಧನದ ಸುದ್ದಿ ಅತೀವ ನೋವುಂಟು ಮಾಡಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Previous articleಮಾಲ್ಡೀವ್ಸ್ ಭುಜದ ಮೇಲೆ ಚೀನಾ ಬಂದೂಕು
Next articleಮಗು ಕೊಂದು ಸೂಟ್ ಕೇಸ್​ನಲ್ಲಿ ಶವ ರವಾನಿಸುತ್ತಿದ್ದ ಮಹಿಳಾ ಉದ್ಯಮಿಯ ಬಂಧನ