Home ತಾಜಾ ಸುದ್ದಿ ವಿಮಾನದಲ್ಲಿ ತಾಂತ್ರಿಕ ತೊಂದರೆ: ರಾತ್ರಿಯಿಡೀ ಲಾಂಜ್‌ನಲ್ಲಿಯೇ ಪ್ರಯಾಣಿಕರ ಪರದಾಟ

ವಿಮಾನದಲ್ಲಿ ತಾಂತ್ರಿಕ ತೊಂದರೆ: ರಾತ್ರಿಯಿಡೀ ಲಾಂಜ್‌ನಲ್ಲಿಯೇ ಪ್ರಯಾಣಿಕರ ಪರದಾಟ

0
132

ಮಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಅಡಚಣೆಯಿಂದ ಪ್ರಯಾಣಿಕರು ಸೋಮವಾರ ರಾತ್ರಿ ಪರದಾಟ ನಡೆಸಿದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸಂಜೆ 7ಗಂಟೆಗೆ ದಮಾಮ್‌ಗೆ ಹಾರಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಯಿಂದ ಈ ತೊಂದರೆ ಆಗಿದೆ. ಟೇಕಾಫ್‌ಗೆ ಸಿದ್ದವಾಗಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಟೇಕಾಫ್‌ ಆಗದೇ ವಿಮಾನದಲ್ಲಿ ಏಕಾಏಕಿ ಲೈಟ್ ಆಫ್ ಆಗಿದೆ. ಪರಿಣಾಮ ಪ್ರಯಾಣಿಕರು ಕತ್ತಲೆಯಲ್ಲಿ ಕುಳಿತುಕೊಳ್ಳುವಂತಾಯ್ತು. ಬಳಿಕ ಟೇಕಾಫ್ ರದ್ದುಗೊಳಿಸಿದ್ದರಿಂದ ವಿಮಾನವೇರಿ ಕುಳಿತಿದ್ದ ಪ್ರಯಾಣಿಕರನ್ನು ವಿಮಾನ ಸಿಬ್ಬಂದಿಯು ಮತ್ತೆ ಏರ್ಪೋರ್ಟ್ ಲಾಂಜ್‌ಗೆ ಕಳುಹಿಸಿದರು. ಆದ್ದರಿಂದ ರಾತ್ರಿಯಿಡೀ ಪ್ರಯಾಣಿಕರು ಲಾಂಜ್‌ನಲ್ಲಿಯೇ ಪರದಾಡುವಂತಾಯ್ತು‌. ಮಂಗಳವಾರ ಬೆಳಗ್ಗೆ 7.20ಕ್ಕೆ ವಿಮಾನ ದಮಾಮ್‌ನತ್ತ ಹಾರಾಟ ನಡೆಸಿದೆ.