ವಿಧಾನಸಭೆ ಸ್ಪೀಕ‌ರ್ ಆಗಿ ವಿಜೇಂದ‌ರ್ ಗುಪ್ತಾ ಆಯ್ಕೆ

0
16

ಮೂರನೇ ಬಾರಿಗೆ ವಿಧಾನಸಭೆಯ ಸದಸ್ಯನಾಗಿ ಪ್ರಮಾಣ ವಚನ

ನವದೆಹಲಿ: ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ಧ್ವನಿ ಮತದ ಮೂಲಕ ನೂತನ ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನು ಈ ಕುರಿತಂತೆ ಗುಪ್ತಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಇಂದು ನಾನು ಮೂರನೇ ಬಾರಿಗೆ ದೆಹಲಿ ವಿಧಾನಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದಿದ್ದಾರೆ.

ಅತಿಶಿ ಅಭಿನಂದನೆ: ಇನ್ನು ವಿಜೇಂದ‌ರ್ ಗುಪ್ತಾ ಆಯ್ಕೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಅತಿಶಿ ಅವರು ಸ್ಪೀಕರ್ ಆಗಿ ಆಯ್ಕೆಯಾದ ಗುಪ್ತಾ ಅವರನ್ನು ಅಭಿನಂದಿಸಿದರು. ವಿಪಕ್ಷ ನಾಯಕಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ ವಿಜೇಂದರ್ ಗುಪ್ತಾ ಅವರನ್ನು ನಾನು ಅಭಿನಂದಿಸುತ್ತೇನೆ. ಇಂದು, ನೀವು ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿರುವುದರಿಂದ, ನಮ್ಮೆಲ್ಲರ ಪರವಾಗಿ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಜೇಂದರ್ ಗುಪ್ತಾ ಜಿ ಯಾವಾಗಲೂ ವಿಧಾನಸಭೆಯಲ್ಲಿ ಜನರ ಸಮಸ್ಯೆಗಳನ್ನು ಎತ್ತಿದ್ದಾರೆ ಮತ್ತು ಅವರು ಅದನ್ನು ಬಹಳ ಶಕ್ತಿಯಿಂದ ಮಾಡಿದ್ದಾರೆ. ಮತ್ತೊಮ್ಮೆ, ಸ್ಪೀಕರ್ ಆಗಿದ್ದಕ್ಕಾಗಿ ನಿಮಗೆ ಅಭಿನಂದನೆಗಳು ಎಂದರು.

Previous articleಸರ್ಕಾರ ದಿವಾಳಿ ಆಗಿಲ್ಲ, ದಾಖಲೆ ತೆಗೆದುಕೊಂಡು ಬನ್ನಿ: ಬಿಜೆಪಿಗೆ ಖರ್ಗೆ ಸವಾಲ್
Next articleಕರ್ನಾಟಕ ಬಸ್‌ಗಳ ಮೇಲೆ ಪುಂಡಾಟಿಕೆ