ವಿದ್ಯುತ್ ಸ್ಪರ್ಶ: ಯುವಕ ಸಾವು

0
20
ಸಾವು

ಬೆಳಗಾವಿ: ಬೋರ್ವೆಲ್ ನಿಂದ ಜಮೀನಿಗೆ ನೀರು ಹಾಯಿಸಲು ಹೋದ ಯುವಕನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ದಾರುಣ ಘಟನೆ ಖಾನಾಪುರ ತಾಲ್ಲೂಕಿನಲ್ಲಿ ನಡೆದಿದೆ.
ಖಾನಾಪುರದ ಬೇಕವಾಡದಲ್ಲಿ ಬುಧವಾರ ಮಧ್ಯಾಹ್ನ ಈ ದುರಂತ ಘಟನೆ ನಡೆದಿದ್ದು ಮೃತನನ್ನು ಝುಂಜವಾಡದ ನಿವಾಸಿ ಜ್ಣಾನೇಶ್ವರ ಚಂಗಪ್ಪ ಮಾಳವಿ (೩೪) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಹೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ಕಲ್ಪನಾ ತಿರವೀರ, ನಂದಗಡ ಪೊಲೀಸ್ ಠಾಣೆಯ ಸಹಾಯಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದರು.

Previous articleಭಾರತ ಹಿಂದುರಾಷ್ಟ್ರವಾದರೆ ದೊಡ್ಡ ಅಪಾಯ
Next articleಗ್ರೀನ್ ಕಾರಿಡಾರ್ ಮೂಲಕ ಅಂಗಾಂಗ ರವಾನೆ