ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಭಸ್ಮ

0
27

ಹೊಸಪೇಟೆ: ನಗರದ ಸಿದ್ಧಲಿಂಗಪ್ಪ ಚೌಕಿ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದು ಸುಟ್ಟು ಭಸ್ಮವಾದ ಘಟನೆ ಗುರುವಾರ ನಡೆದಿದೆ.
ಸಿದ್ದಲಿಂಗಪ್ಪ ಚೌಕಿಯ ಬೀದಿ ಬದಿ ವ್ಯಾಪಾರಿ ನಂದಾಬಾಯಿ ಎಂಬುವವರ ಗುಡಿಸಲು ವಿದ್ಯುತ್ ಸ್ಪರ್ಶದಿಂದ ಸುಟ್ಟು ಭಸ್ಮವಾಗಿದೆ.
ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತಾ ಹಾಗೂ ಪೌರಾಯುಕ್ತ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಹಾನಿಗೊಳಗಾದ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ೫ ಸಾವಿರ ರೂ. ನೆರವು ನೀಡಿದರು. ನಗರಸಭೆಯಿಂದ ಸೂಕ್ತ ಆರ್ಥಿಕ ನೆರವು ಕಲ್ಪಿಸಿಕೊಡುವ ಜತೆ ಶೀಘ್ರ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ವಾರ್ಡ್ ಕೌನ್ಸಲರ್ ಎಚ್.ಮುನ್ನಿ ಕಾಸಿಂ ಜೊತೆಗಿದ್ದರು.

Previous articleಬೈಕ್ ಮುಖಾಮುಖಿ ಡಿಕ್ಕಿ ಸವಾರರಿಬ್ಬರ ಸಾವು
Next article11ರಂದು ದೇವರಗುಡ್ಡದಲ್ಲಿ ಕಾರಣಿಕ