ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

0
20


ದಾವಣಗೆರೆ: ವಿದ್ಯುತ್ ಶಾಟ್೯ಸಕ್ಯೂಟ್೯ ನಿಂದ ವ್ಯಕ್ತಿಯೊಬ್ಬರು ಮೃತಪಟ್ಡಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ನಗರದ ವಿದ್ಯಾನಗರದ ನೂತನ ಕಾಲೇಜು ರಸ್ತೆಯಲ್ಲಿರುವ ಮಾಜಿ ಶಾಸಕ ಗುರುಸಿದ್ದನಗೌಡ ಅವರ ಮನೆ ಎದುರು ಇರುವ ಸ್ಮಾಟ್೯ಸಿಟಿ ಬಸ್ ಸ್ಟಾಪ್ ನಲ್ಲಿರುವ ಜಾಹೀರಾತು ಬೋಡ್೯ನಿಂದ ವಿದ್ಯುತ್ ಪ್ರವಹಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಮೃತಪಟ್ಟ ವ್ಯಕ್ತಿ ಯಾರು, ಯಾವ ಊರು, ಆತನ ಹೆಸರು ಏನು ಎಂಬ ಮಾಹಿತಿ ತಿಳಿದು ಬಂದಿಲ್ಲ.
ಇಂದು ಸಂಜೆಯಿಂದ ಸುರಿದ ಮಳೆ ಸ್ವಲ್ಪ ಕಾಲ ಬಿಡುವು ನೀಡಿತ್ತು. ನಂತರ ಮತ್ತೆ ತುಂತುರು ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಆತ ಸ್ಮಾಟ್೯ಸಿಟಿ ಬಸ್ ಸ್ಟಾಪ್ ನಿಂತಿರುವಾಗ ವಿದ್ಯುತ್ ಪ್ರವಹಿಸಿ ಈ ಘಟನೆ ನಡೆದಿರಬಹುದು ಎಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿದು ಬಂದಿಲ್ಲ.

Previous articleಸಿಡಿಲು ಬಡೆದು ಕುರಿಗಾಹಿ ಬಾಲಕ ಸಾವು
Next articleವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಪ್ರಮುಖ ಆರೋಪಿ ಪೊಲೀಸರ ವಶಕ್ಕೆ