ವಿದ್ಯುತ್ ತಂತಿ ತುಳಿದು ರೈತ ಸಾವು

0
14

ಬೆಳಗಾವಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತನೊಬ್ಬ ಸಾವನ್ನಪ್ಪಿದ ಘಟನೆ ಕಿತ್ತೂರಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ದಾಸನಕೊಪ್ಪ ಎಂಬುವರೇ ಮೃತ ರೈತ. ಸೋಮವಾರ ಮನೆಯಿಂದ ತಮ್ಮ ಜಮೀನಿಗೆ ಹೋಗುವಾಗ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಭಾರೀ ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆದರೆ ಇದನ್ನು ಇಂದು ಮುಂಜಾನೆ ಗಮನಿಸದೆ ತುಂಡಾಗಿ ಬಿದ್ದಿದ್ದ ತಂತಿ ತುಳಿದ ಕಾರಣಕ್ಕೆ ವಿದ್ಯುತ್ ಹರಿದು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Previous articleಭಾರತ ಅಭಿವೃದ್ಧಿಪಥದಲ್ಲಿ ಸಾಗುತ್ತಿರುವ ರಾಷ್ಟ್ರ
Next articleಮಹಾಬಲೇಶ್ವರ ಮಂದಿರಕ್ಕೆ ಸುಧಾಮೂರ್ತಿ ಭೇಟಿ