ವಿದ್ಯಾರ್ಥಿಗಳು ಶೌಚಾಲಯ ತೊಳೆದರೆ ತಪ್ಪಲ್ಲ

0
9

ಮಂಗಳೂರು: ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳು ತೊಳೆದರೆ ತಪ್ಪಿಲ್ಲ, ವಿದ್ಯಾರ್ಥಿಯಾಗಿದ್ದಾಗ ಶಾಲೆಯ ಶೌಚಾಲಯವನ್ನು ನಾವು ವಿದ್ಯಾರ್ಥಿಗಳೇ ಸ್ವಚ್ಛ ಮಾಡುತ್ತಿದ್ದೆವು ಎಂದು ಸ್ಪೀಕರ್ ಯು.ಟಿ. ಖಾದರ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತಹ ಕೆಲಸ ಕಾರ್ಯಗಳು ಶಿಕ್ಷಣದ ಒಂದು ಭಾಗ. ಮಕ್ಕಳು ಎಲ್ಲಾ ವಿಚಾರದಲ್ಲೂ ಸ್ವಾವಲಂಭಿಗಳಾಗಬೇಕು ನಮ್ಮ ಮನೆಯಲ್ಲೂ ಕೂಡ ಮಕ್ಕಳಿಗೆ ಅದನ್ನು ಕಲಿಸುತ್ತೇವೆ. ಸ್ವಚ್ಚತೆ ಬಗ್ಗೆ ಅರಿವು ಮೂಡಲು ಕೈಗೆ ಗ್ಲೌಸ್ ಹಾಕಿ ಶೌಚಾಲಯ ಸ್ವಚ್ಛ ಮಾಡಿಸಬೇಕು ಆದರೆ ಒತ್ತಾಯ ಪೂರ್ವಕವಾಗಿ ಸ್ವಚ್ಚಗೊಳಿಸಬಾರದು ಮಕ್ಕಳ ಶೌಚಾಲಯವನ್ನು ಮಕ್ಕಳೇ ಸ್ವಚ್ಚಗೊಳಿಸಿದರೆ ತಪ್ಪಿಲ್ಲ ಎಂದಿದ್ದಾರೆ.

Previous articleಸರ್ಕಾರದ ಮೇಲೆ ಯತ್ನಾಳ ಗರಂ
Next articleಕಾಲಿಗೆ ಗುಂಡು ಹಾರಿಸಿ ನಟೋರಿಯಸ್ ರೌಡಿ ಸೆರೆ