ವಿಡಿಯೋ ಆಧರಿಸಿ ಕೀಡಿಗೇಡಿ ಗೂಂಡಾಗಳೆಲ್ಲರನ್ನೂ ಬಂಧಿಸಿ

0
13

ಬೆಂಗಳೂರು: ಘಟನೆಗೆ ಸ್ಪಷ್ಟ ಸಾಕ್ಷಿ ಒದಗಿಸಿರುವ ವಿಡಿಯೋ ಆಧರಿಸಿ ಕೀಡಿಗೇಡಿ ಗೂಂಡಾಗಳೆಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಿಧಾನ ಸೌಧದಲ್ಲೇ ಪಾಕ್ ಜಿಂದಾಬಾದ್ ಕೂಗಿದ ದುರುಳರ ದೃಷ್ಕೃತ್ಯದ ನಂತರ ಲಂಗು ಲಗಾಮು ಇಲ್ಲದೇ ದೇಶ ದ್ರೋಹಿ ಮನಸ್ಥಿತಿಯ ಗೂಂಡಾಗಳು ಅಟ್ಟಹಾಸ ಮೆರೆಯುತ್ತಿದ್ದಾರೆ, ಪೋಲಿಸರ ಭಯ ಇಲ್ಲದಂತಹ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ನಿರ್ಮಿಸಿದೆ.
ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಧಾರ್ಮಿಕ ಭಾವನೆಗಳಿಗೆ ನಿರಂತರ ದಕ್ಕೆಯುಂಟಾಗುವುದರ ಜತೆಗೇ ಹಿಂದೂ ನಾಗರಿಕರಿಗೆ ರಕ್ಷಣೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಜಾನ್ ಕೂಗುವಾಗ ಹನುಮಾನ್ ಚಾಲೀಸ್ ಹಾಕಬಾರದು ಎಂದು ಬೆಂಗಳೂರಿನ ಮೊಬೈಲ್ ಅಂಗಡಿಗೆ ನುಗ್ಗಿ ಅಮಾನುಷ ಹಲ್ಲೆ ನಡೆಸಿರುವ ಗೂಂಡಾ ಪ್ರಕರಣ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇಂಥಾ ಘಟನೆಗಳನ್ನು ನೋಡಿಕೊಂಡು ಕರ್ನಾಟಕ ಬಿಜೆಪಿ
ಸುಮ್ಮನೆ ಕೂರಲಾಗದು ಎಂದು ಸರ್ಕಾರವನ್ನು ಎಚ್ಚರಿಸುತ್ತಿದ್ದೇನೆ. ಹಲ್ಲೆಗೊಳಗಾಗಿರುವ ಮುಖೇಶ್ ಅವರಿಗೆ ಕೂಡಲೇ ರಕ್ಷಣೆ ಒದಗಿಸಬೇಕು. ಘಟನೆ ನಡೆದ ಪ್ರದೇಶದಲ್ಲಿ ಹಿಂದೂ ವ್ಯಾಪಾರಿ ಸಮುದಾಯ ನಿರ್ಭಯವಾಗಿ ವ್ಯವಹಾರ ನಡೆಸಲು ಅಗತ್ಯ ಭದ್ರತಾ ವ್ಯವಸ್ಥೆ ಈ ಕೂಡಲೇ ಕಲ್ಪಿಸಲು ಒತ್ತಾಯಿಸುವೆ. ಘಟನೆಗೆ ಸ್ಪಷ್ಟ ಸಾಕ್ಷಿ ಒದಗಿಸಿರುವ ವಿಡಿಯೋ ಆಧರಿಸಿ ಕೀಡಿಗೇಡಿ ಗೂಂಡಾಗಳೆಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಜಿಹಾದಿ ಮನಸ್ಥಿತಿಯ ಗೂಂಡಾಗಳು ಇನ್ನು ಮುಂದೆ ತಲೆ ಎತ್ತದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಲು ಆಗ್ರಹಿಸುವೆ ಎಂದಿದ್ದಾರೆ.

Previous articleರಾಜೀನಾಮೆ ಪಡೆದು ಫುಲ್ ಟೈಮ್ ಪಕ್ಷದ ಕೆಲಸ ಮಾಡಲು ಹೇಳಿ…
Next articleಕುಡಿಯುವ ನೀರಿನ ಸಮಸ್ಯೆ: ಟವರ್ ಏರಿದ ಯುವಕ