ವಿಜಯೇಂದ್ರ ನೇಮಕ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ನಷ್ಟ

0
11

ಕೊಪ್ಪಳ: ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು, ಕಾಂಗ್ರೆಸ್ಸಿಗೆ ಯಾವುದೇ ನಷ್ಟವಿಲ್ಲ. ಬದಲಿಗೆ ಬಿಜೆಪಿಗೆ ನಷ್ಟವಾಗಲಿದೆ ಎಂದು ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರಗೆ ಅಭಿನಂದನೆಗಳು. ನಾನೂ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ಹೀಗಾಗಿ ಬಿಜೆಪಿಯವರಲ್ಲಿಯೇ ಅಸಮಾಧಾನ ಸ್ಫೋಟವಾಗಿದೆ. ಹಾಗಾಗಿ ವಿಜಯೇಂದ್ರಗೆ ನೆಮ್ಮದಿಯಿಂದ ಆಡಳಿತ ಮಾಡಲು ಸ್ವಪಕ್ಷೀಯರೇ ಬಿಡುವುದಿಲ್ಲ ಎಂದರು ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಇದ್ದರು.

Previous article‘ಕರುನಾಡ ಜಯದ ಕಿರೀಟ’
Next articleಬಗೆದಷ್ಟು ಬಯಲಾಗುತ್ತಿದೆ ಆರ್ ಡಿ ಪಾಟೀಲ್ ಕರ್ಮ ಕಾಂಡ